Kannada NewsKarnataka NewsLatest

*ಬಟ್ಟೆ ಒಣಗಿಸುವಾಗ ಕರೆಂಟ್ ಶಾಕ್*: *ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು*

ಪ್ರಗತಿವಾಹಿನಿ ಸುದ್ದಿ: ವಿದ್ಯುತ್‌ ಅವಘಡಕ್ಕೆ ತಾಯಿ, ಮಗ ಇಬ್ಬರೂ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಬಟ್ಟೆ ಒಣಗಿಸಲು ಹೋಗಿ ಈ ದುರಂತ ಸಂಭವಿಸಿದೆ.

ತಾಯಿ ಮರ್ಸಿ ಮಸ್ಕರೇನಸ್ (45), ಪುತ್ರ ಶೋನ್ ಮಸ್ಕರೇನಸ್ (18) ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿಯ ವರ್ಣಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ 7 ರಿಂದ 8 ಗಂಟೆ ನಡುವೆ ಬಟ್ಟೆ ಒಣಗಿಸಲು ಹಾಕುವಾಗ ಬಟ್ಟೆ ತಂತಿಗೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿದ್ದು, ತಾಯಿ – ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ಮೂಡುಬಿದಿರೆ ಹೋಲಿ ರೋಸರಿ ವಿದ್ಯಾರ್ಥಿಯಾಗಿದ್ದ ಶೋನ್ ಮಸ್ಕರೇನಸ್ ಬಟ್ಟೆ ಒಣಗಿಸುವಾಗ ವಿದ್ಯುತ್ ಅವಘಡ ಸಂಭವಿಸಿದೆ. ಈ ವೇಳೆ ಮಗನನ್ನ ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button