Karnataka News

*ಮತ್ತೊಂದು ಅಮಾನವೀಯ ಘಟನೆ: ಮೃತ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿ ಬಿಟ್ಟು ಹೋದ ಮಾಲೀಕ*

ಪ್ರಗತಿವಾಹಿನಿ ಸುದ್ದಿ; ಮೃತ ಕೂಲಿ ಕಾರ್ಮಿಕನೊಬ್ಬನ ಮೃತದೇಹವನ್ನು ರಸ್ತೆ ಬದಿ ಮಲಗಿಸಿ ಹೋಗಿರುವ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಚಿಕ್ಕಮುಡ್ನೂರು ಗ್ರಾಮದ ಶಿವಪ್ಪ (70) ಮೃತ ಕಾರ್ಮಿಕ. ಸಾಲ್ಮರ ತಾವ್ರೋ ಇಂಡಸ್ತ್ರ‍ೀಸ್ ಸಂಸ್ಥೆಯ ಮಾಲೀಕ ಹೆನ್ರಿ, ಗಾರೆ ಕೆಲಸಕ್ಕೆ ಕೂಲಿ ಕಾರ್ಮಿಕ ಶುವಪ್ಪನನ್ನು ಕರೆಸಿಕೊಂಡಿದ್ದ. ಕೆಲಸದ ವೇಳೆ ಶಿವಪ್ಪ ಏಕಾಏಕಿ ಸಾವನ್ನಪ್ಪಿದ್ದಾನೆ. ಬಳಿಕ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಕುಟುಂಬದವರಿಗೂ ಮಾಹಿತಿ ನೀಡದೇ ಮನೆಯ ಪಕ್ಕದಲ್ಲಿ ರಸ್ತೆ ಬದಿ ಮಲಗಿಸಿ ಹೋಗಿದ್ದಾನೆ.

Home add -Advt

ರಸ್ತೆ ಬದಿ ಶಿವಪ್ಪನ ಮೃತದೇಹವಿರುವುದು ಕಂಡು ಮಗಳು ಹಾಗೂ ಶಿವಪ್ಪನ ಪತ್ನಿ ದಂಗಾಗಿದ್ದರೆ. ಶಿವಪ್ಪ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಗೂ ಕರೆದೊಯ್ದಿಲ್ಲ. ಕುಟುಂಬದವರಿಗೂ ಹೇಳಿಲ್ಲ. ಈ ಘಟನೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಮಾಲೀಕ ಹೇನ್ರಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

Related Articles

Back to top button