ಪ್ರಗತಿವಾಹಿನಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಡಾನಾ ಚಂಡಮಾರುತವಾಗಿ ಮಾರ್ಪಟ್ಟಿದ್ದು, ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅಕ್ಟೋಬರ್ 24 ಹಾಗೂ 25ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಡಾನಾ ಚಂಡಮಾರುತ ಅಪ್ಪಳಿಸಲಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಎರಡೂ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಅ.22ರಂದು ವಾಯುಭಾರ ಕುಸಿತವುಂಟಟಾಗಿ. ಪರಿಣಾಮ ಅ.23ರಂದು ಚಂಡಮಾರುತ ಸುಷ್ಟಿಯಾಗಿದ್ದು, ಈ ಚಂಡಮಾರುತವನ್ನು ಡಾನಾ ಚಂಡಮಾರುತ ಎಂದು ಕರೆಯಲಾಗಿದೆ. ಅ.24ಕ್ಕೆ ಈ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ. ಈಗಾಗಲೇ ಉತ್ತರದ ಅಂಡಮಾನ್ ನಿಕೋಬಾರ್ ಕಡಲತೀರದಲ್ಲಿ ಚಂಡಮಾರುತದ ಅಬ್ಬರ ಆರಂಭವಾಗಿದೆ.
ಗಂಟೆಗೆ 15ಕಿ.ಮೀ ವೇಗದಲ್ಲಿ ಹೊರಹೊಮ್ಮುವ ಚಂಡಮಾರುತ ಆಗ್ನೇಯ ದಿಕ್ಕಿನಲ್ಲಿ ಚಲಿಸಲಿದ್ದು, ಗಂಟೆಗೆ 520ಕಿ.ಮೀ ವೇಗದಲ್ಲಿ ಮುನ್ನುಗ್ಗಲಿದೆ. ಓಡಿಶಾಗೆ ಅಪ್ಪಳಿಸುವ ಚಂಡಮಾರುತ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಗಂಟೆಗೆ 110ಕೀಮೀ ಯಿಂದ 120ಕಿ.ಮೀ ವೇಗದಲ್ಲಿ ಚಲಿಸಲಿದೆ. ಎರಡೂ ರಾಜ್ಯಗಳಲ್ಲಿಯೂ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ