
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಕೇರ್ ಫಾರ್ ಯು ಸ್ವಯಂ ಸೇವಾ ಸಂಸ್ಥೆ ಅನಾಥ ಮಕ್ಕಳಿಗಾಗಿ ದಾಂಡಿಯಾ ಮತ್ತು ಗರ್ಬಾ ನೃತ್ಯ ಕಾರ್ಯಾಗಾರ ಸಂಘಟಿಸಿತ್ತು

ಕೇರ್ ಫಾರ್ ಯು ಸಂಘಟನೆಯ ಶೀತಲ್ ಭಂಡಾರಿ, ಡಾ.ದೀಪಾಲಿ ಪಾಟೀಲ, ಡಾ.ರಜನಿ ಮಿಶ್ರಾ, ಗಾಯತ್ರಿ ರಾಯಬಾಗಿ, ರೋಹಿಣಿ ಬೆಂಬಳಗಿ ಮೊದಲಾದವರು ಭಾಗವಹಿಸಿದ್ದರು.

ಹಿರಿಯ ನಾಗರಿಕರಿಗೆ ಪ್ರವಾಸಗಳನ್ನು ಸಂಘಟಿಸುವುದು, ವ್ಯಕ್ತಿತ್ವ ವಿಕಸನ ಶಿಬಿರ ಸಂಘಟನೆ, ಅನಾಥ ಬಾಲಕಿಯರಿಗೆ ವೃತ್ತಿ ತರಬೇತಿ, ಅನಥ ಮಕ್ಕಳಲ್ಲಿ ಜೀವನ ಕೌಶಲ್ಯ ತುಬುವುದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವುದು ಮೊದಲಾದ ಕೆಲಸಗಳನ್ನು ಕೇರ್ ಫಾರ್ ಯು ಫೌಂಡೇಶನ್ ಮಾಡುತ್ತಿದೆ.