Cancer Hospital 2
Beereshwara 36
LaxmiTai 5

*ದರ್ಶನ್ ಮೇಲಿನ ಹುಚ್ಚು ಅಭಿಮಾನಕ್ಕೆ ಹೆತ್ತ ಮಗುವನ್ನೇ ಖೈದಿಯಂತೆ ಬಿಂಬಿಸಿದ ಅಭಿಮಾನಿ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ದಿನದಿಂದ ದಿನಕ್ಕೆ ಹುಚ್ಚು ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ದರ್ಶನ್ ಗೆ ಜೈಲಿನಲ್ಲಿ ನೀಡಿರುವ ವಿಚಾರಣಾಧೀನ ಖೈದಿ ಸಂಖ್ಯೆಯನ್ನು ಕೆಲ ಅಭಿಮಾನಿಗಳು ತಮ್ಮ ವಾಹನ ರಿಜಿಸ್ಟ್ರೇಶನ್ ಗೆ ನೀಡಿದ್ದರೆ, ಮತ್ತೆ ಹಲವರು ಖೈದಿ ನಂಬರ್ ನಲ್ಲಿಯೇ ದರ್ಶನ್ ಭಾವಚಿತ್ರ ಬಿಡಿಸಿ ಹುಚ್ಚಾಟ ಮೆರೆದಿದ್ದಾರೆ. ಆದರೆ ಇಲ್ಲೋರ್ವ ಅಭಿಮಾನಿ ತನ್ನ ಮಗುವನ್ನೇ ಖೈದಿಯನ್ನಾಗಿ ಬಿಂಬಿಸಿ ಇನ್ನೊಂದು ವಿಲಕ್ಷಣತೆ ಮೆರೆದಿದ್ದಾನೆ.

ಅಭಿಮಾನ ಎನ್ನುವುದು ಅವರು ಅಭಿನಯಿಸುವ ಪಾತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅರ್ಥವಿದೆ. ಆದರೆ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಆರೋಪಿಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ ನ್ನು ತಮ್ಮ ವಾಹನಗಳಿಗೆ ನೋಂದಣಿ ಮಾಡಿಸಿಕೊಳ್ಳುವುದು, ವಾಹನಗಳ ಮೇಲೆ ಖೈದಿ ನಂಬರ್ ಗಳನ್ನು ಹಾಹಿಕಿಸಿಕೊಂಡು ಹುಚ್ಚು ಅಭಿಮಾನ ತೋರುವುದು ಹುಚ್ಚುತನ… ಇನ್ನೂ ವಿಪರೀತಕ್ಕೆ ತಲುಪಿದ ಅಭಿಮಾನಿಯಿಬ್ಬ ಏನೂ ಅರಿಯದ ತನ್ನ ಒಂದು ವರ್ಷದ ಮಗುವನ್ನು ಖೈದಿಯಂತೆ ಬಿಂಬಿಸಿ ಫೋಟೋಶೋಟ್ ಮಾಡಿಸಿದ್ದು ಎಷ್ಟು ಸರಿ? ಮಗುವಿನ ಭವಿಷ್ಯದ ಬಗ್ಗೆ ಏನೆಂದು ಆಶಿಸಲು ಹೊರಟಿದ್ದಾನೆ ?

Emergency Service

ದರ್ಶನ್ ಮೇಲಿನ ಹುಚ್ಚು ಅಭಿಮಾನಕ್ಕೆ ವ್ಯಕ್ತಿಯೊಬ್ಬ ತನ್ನ ಒಂದು ವರ್ಷದ ಮಗುವಿಗೆ ಖೈದಿ ರೀತಿ ಬಟ್ಟೆ ಹಾಕಿ, ಬಟ್ಟೆ ಮೇಲೆ ಖೈದಿ ನಂಬರ್ 6106 ಎಂದು ಬರೆದಿರುವುದೂ ಅಲ್ಲದೇ ಮಗು ಪಕ್ಕದಲ್ಲೇ ಕೈ ಕೋಳ ಮಾದರಿಯನ್ನು ಇಟ್ಟು, ಜೈ ಡಿ ಬಾಸ್ ಎಂದು ಬರೆದು ಫೋಟೊಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಶೇರ್ ಮಾಡಿ ಸಂಭ್ರಮಿಸಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋಗೆ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಮಗುವಿಗೆ ಉತ್ತಮ ಶಿಕ್ಷಣ, ಒಳ್ಳೆಯ ಭವಿಷ್ಯದ ಬಗ್ಗೆ ಯೋಚಿಸಿ ಅಂತಹ ಕನಸಿನ ಬಗ್ಗೆ ಆಶಿಸುವುದನ್ನು ಬಿಟ್ಟು ಮಗುವಿಗೆ ಖೈದಿ ನಂಬರ್ ಕೊಟ್ಟು, ಪಕ್ಕದಲ್ಲಿ ಕೈಕೋಳದ ರೀತಿ ಬಿಂಬಿಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bottom Add3
Bottom Ad 2