Film & EntertainmentKannada NewsKarnataka NewsLatest

*ಜೈಲಿನಲ್ಲಿಯೇ ದರ್ಶನ್ ಭೇಟಿಗೆ ಹಠ ಹಿಡಿದ ಪವಿತ್ರಾ ಗೌಡ: ನಿರಾಕರಿಸಿದ ದರ್ಶನ್*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸ್ದಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಟ್ರಯಲ್ ಆರಂಭವಾಗಿದೆ. ಸಾಕ್ಷಿಗಳ ಹೇಳಿಕೆ, ರೇಣುಕಾಸ್ವಾಮಿ ತಂದೆ-ತಾಯಿಗಳ ಹೇಳಿಕೆಗಳನ್ನು ಇನ್ ಕ್ಯಾಮರಾದಲ್ಲಿ ದಾಖಲಿಸಲಾಗುತ್ತಿದೆ. ಟ್ರಯಲ್ ಆರಂಭವಾಗಿರುವ ಬೆನ್ನಲ್ಲೇ ನಟ ದರ್ಶನ್, ಪವಿತ್ರಾಗೌಡಗೆ ಆತಂಕ ಶುರುವಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಜೈಲಿನಲ್ಲಿ ಪವಿತ್ರಾಗೌಡ, ದರ್ಶನ್ ನನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕೇಳಿದ್ದಾಳೆ ಎಂದು ತಿಳಿದುಬಂದಿದೆ. ಕೋರ್ಟ್ ನಲ್ಲಿ ಟ್ರಯಲ್ ಆರಂಭವಾಗಿರುವುದರಿಂದ ದರ್ಶನ್ ಜೊತೆ ಮಾತನಾಡಬೇಕು ಎಂದು ಹಠ ಹಿಡಿದಿದ್ದಾಲೆ. ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಈ ಬಗ್ಗೆ ಮನವಿ ಮಾಡಿದ್ದಾಳೆ. ಆದರೆ ದರ್ಶನ್ ಪವಿತ್ರಾ ಗೌಡ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.

ತಾನು ಕಾನೂನು ಹೋರಾಟ ಮಾಡುವುದಾಗಿ, ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಅವಕಾಶವಿದೆಯಾ ಎಂದು ಪರಿಶೀಲಿಸುವುದಾಗಿ ಹೇಳಿದ್ದಾರೆ. ಪವಿತ್ರಾ ಗೌಡ ಜೊತೆ ಮಾತನಾಡಲು ದರ್ಶನ್ ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.

Home add -Advt

Related Articles

Back to top button