
ಪ್ರಗತಿವಾಹಿನಿ ಸುದ್ದಿ, ರಾಯಬಾಗ: ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕಳೆದ ರಾತ್ರಿ 20 ಕುರಿಗಳು ಬಲಿಯಾಗಿದ್ದು ತೋಳ ದಾಳಿ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ರಬಕವಿ ಎಂಬುವವರ ತೋಟದ ಜಮೀನದಲ್ಲಿ ತಂಗಿದ್ದ 20 ರಿಂದ 25 ಕುರಿಗಳು ಮತ್ತು ಕುರಿಮರಿಗಳನ್ನು ಬೇರೆ ಪ್ರಾಣಿ ದಾಳಿ ನಡೆಸಿ ಕೊಂದು ಹಾಕಿದೆ.
ಕುರಿಗಳ ಮಾಲೀಕ ಮಲ್ಲಪ್ಪ ಯಲ್ಲಪ್ಪ ಹಿರೆಕೋಡಿ ಎಂಬುವವರು 112 ಗೆ ಕರೆ ಮಾಡಿ ನೀಡಿದ ಮಾಹಿತಿ ಮೇರೆಗೆ ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಲ್ಲಪ್ಪ ಅವರು ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತನಿಖೆ ಮುಂದುವರಿದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ನಿಖರವಾಗಿ ತಿಳಿದುಬರಲಿದೆ.
ಹುಕ್ಕೇರಿ ಕ್ಷೇತ್ರದಲ್ಲಿ ಈ ಬಾರಿ ಎದುರಾಳಿಗಳ್ಯಾರ್ಯಾರು?
https://pragati.taskdun.com/who-are-the-opponents-this-time-in-hukkeri-constituency/
https://pragati.taskdun.com/kgfprajapratidhwanid-k-shivakumarmla-roopa/
ವೈವಿದ್ಯತೆಯೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೊಬಗು – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
https://pragati.taskdun.com/diversity-is-the-beauty-of-belgaum-rural-constituency-mla-lakshmi-hebbalkar/