Kannada NewsKarnataka News

ಹುಕ್ಕೇರಿ ಸಮಾವೇಶದಲ್ಲಿ ಬೆಂಗಳೂರು ಪ್ರವೇಶದ ದಿನ ನಿಗದಿ – ಜಯ ಮೃತ್ಯುಂಜಯ ಸ್ವಾಮೀಜಿ

  • ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಪಂಚಮಸಾಲಿ ಸುಮುದಾಯಕ್ಕೆ ೨ ಎ ಮೀಸಲಾತಿ ನೀಡಬೇಕೆಂದು ಅ.೨೧ ಹುಕ್ಕೇರಿಯಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೂ ಮುಂಚೆ ಕಾರ್ಯಕಾರಣಿ ಸಭೆ ನಡೆಯಲ್ಲಿದ್ದು, ಬೆಂಗಳೂರು ಪ್ರವೇಶ ಕುರಿತು ದಿನಾಂಕ ನಿಗಧಿ ಪಡಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
  • ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ೪ ಸಲ ಮಾತು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾತು ತಪ್ಪಿದ್ದಾರೆ. ಹುಕ್ಕೇರಿಯಲ್ಲಿ ನಡೆಯುವ ಪಂಚಮಸಾಲಿ ಸಮಾವೇಶದಲ್ಲಿ ಮೀಸಲಾತಿ ನೀಡದ ಸರ್ಕಾರದ ವಿರುದ್ಧ ಹೋರಾಟದ ರೂಪರೇಷೆಗಳನ್ನು ಸಿದ್ಧ ಪಡಿಸುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ನಮ್ಮ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರ ರಚನೆ ಮಾಡಿದ ಆಯೋಗದ ವರದಿಯನ್ನು ತಕ್ಷಣವೇ ಪಡೆದುಕೊಂಡು ನಮಗೆ ಸಿಹಿ ಸುದ್ದಿ ನೀಡಬೇಕು ಎಂದು ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ೨೫ ಲಕ್ಷ ಪಂಚಮಸಾಲಿ ಸಮಾಜದವರು ಒಟ್ಟುಗೂಡಿಸಿ ಸರ್ಕಾರಕ್ಕೆ ಒತ್ತಡ ಹಾಕುವ ಪ್ರಯತ್ನ ಮಾಡಿ ಶಕ್ತಿ ಪ್ರದರ್ಶನ ಮಾಡುವ ಅನಿವಾರ್ಯತೆ ಇದೆ ಎಂದರು.

ಅನೇಕ ರಾಜಕೀಯ ನಾಯಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರು ಮೊದಲು ಅವರ ಪಕ್ಷದಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು. ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಧ್ವನಿಯಾಗಬೇಕು. ಪಂಚಮಸಾಲಿ ಮೀಸಲಾತಿ ಹೋರಾಟದ ಸಮಾವೇಶದ ವೇದಿಕೆಯಲ್ಲಿ ಪಂಚಮಸಾಲಿ ಸಮುದಾಯದ ಹಾಲಿ, ಮಾಜಿ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶವಿದೆ. ಸರ್ಕಾರ ಮೀಸಲಾತಿ ನೀಡಿದ ದಿನಗಳಲ್ಲಿ ನಡೆಯುವ ವಿಜಯೋತ್ಸವದಲ್ಲಿ ಎಲ್ಲ ಸಮಾಜದ ಜನಪ್ರತಿನಿಧಿಗಳನ್ನು ಸಮಾಜದ ಪರವಾಗಿ ಸತ್ಕರಿಸಲಾಗುತ್ತದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಕೂಡಲಸಂಗಮ ಶ್ರೀಗಳು ರಾಜ್ಯಾದ್ಯಂತ ನಡೆಸಿದ
ಪಾದಯಾತ್ರೆಯ ನಂತರ ಪಂಚಮಸಾಲಿ ಸಮಾಜ ಜಾಗೃತವಾಗಿ ಸಂಘಟನೆಯಾಗಿದೆ. ನಮ್ಮ ಸಮಾಜಕ್ಕೆ ಬೇರೆಯವರು ಬೆಂಬಲ ನೀಡುವುದು ಅವಶ್ಯಕತೆ ಇಲ್ಲ. ಹುಕ್ಕೇರಿಯಲ್ಲಿ ನಡೆಯುವ ಸಮಾವೇಶ ಐತಿಹಾಸಿಕ ಸಮಾವೇಶವಾಗಲಿದೆ. ನಾವು ಮೊದಲು ೩೦-೪೦ ಸಾವಿರ ಜನ ಸೇರುವ ನಿರೀಕ್ಷೆ ಮಾಡಲಾಗಿತ್ತು. ಆದರೆ, ಹುಕ್ಕೇರಿ ಸಮಾವೇಶಕ್ಕೆ ೧ ಲಕ್ಷ ಜನರು ಸೇರಲಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ತಾಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಪಂಚಮಸಾಲಿ ೨ಎ ಮೀಸಲಾತಿ ಕುರಿತು ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹಾಗೂ ರಾಜ್ಯದಿಂದ ಸಮಾಜದ ಮುಖಂಡರು ಆಗಮಿಸಲಿದ್ದಾರೆ. ಕಾರಣ ತಾಲೂಕಿನ ಬಾಂಧವರು ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಆರ್.ಕೆ.ಪಾಟೀಲ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ, ಪಂಚಮಸಾಲಿ ಸಮಾಜದ ಮುಖಂಡರಾದ ವಿಜಯ ರವದಿ, ಗುಂಡು ಪಾಟೀಲ, ರವೀಂದ್ರ ಜಿಂಡ್ರಾಳಿ,  ಪಾಟೀಲ, ಧರೇಪ್ಪ ಠಕ್ಕನ್ನವರ, ಬಸವರಾಜ ಪಾಟೀಲ, ಶಿವನಾಯಿಕ ನಾಯಿಕ, ಬಸಗೌಡ ಪಾಟೀಲ, ಚಿದಾನಂದ ಕರದವನ್ನವರ, ಸಂತೋಷ ಮುಡಶಿ, ಜಯಗೌಡ ಪಾಟೀಲ, ಸೇರಿದಂತೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅರುಣ್ ಸಿಂಗ್ ಹೇಳಿಕೆಗೆ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

https://pragati.taskdun.com/latest/jayamrityunjaya-swamiji-was-upset-with-arun-singhs-statement/

ಬೇಡಿಕೆ ಈಡೇರುವವರೆಗೆ 2ಎ ಮೀಸಲಾತಿಗಾಗಿ ಹೋರಾಟ ನಿಲ್ಲದು : ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ

https://pragati.taskdun.com/local/mlc-channaraj-hattiholi-participate-in-2e-reservation-movement-hallur-belagavi/

https://pragati.taskdun.com/latest/basava-jaya-mrutyunjaya-swamijimudalagibelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button