
ಪ್ರಗತಿವಾಹಿನಿ ಸುದ್ದಿ: ಗಣೇಶೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ದಾವಣಗೆರೆಯ ಮಟ್ಟಿಕಲ್ಲ ಬಳಿ ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಸಿದ್ದ ಘಟನೆ ನಡೆದಿದ್ದು, ಈ ಪ್ರಕರಣಕ್ಕೆಸಂಬಂಧಿಸಿದಂತೆ ಪಿಎಸ್ ಐ ಹಗೂ ಇಬ್ಬರು ಕಾನ್ಸ್ ಟೇಬಲ್ ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಮೆಟ್ಟಿಕಲ್ಲ ಬಳಿ ಗಣ್ರೇಶೋತ್ಸವ ವೇಳೆ ಗಣೇಶ ಮೂರ್ತಿ ಪೆಂಡಾಲ್ ಬಳಿ ಶಿವಾಜಿ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶವುಳ್ಳ ಫ್ಲೆಕ್ಸ್ ನ್ನು ವೀರ ಸಾವರ್ಕರ್ ಯುವಕರ ಸಂಘದವರು ಅಳವಡಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೋಮು ಭಾವನೆಗೆ ಧಕ್ಕೆ ತರುವ ರೀತಿಯ ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಕೆ ಮಾಡಿದ್ದರೂ ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಪಿಎಸ್ ಐ ಹಾಗೂ ಇಬ್ಬರು ಕಾನ್ಸ್ ಟೇಬಲ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ದಾವಣಗೆರೆ ಆರ್ ಎಂ ಸಿ ಯಾರ್ಡ್ ಪಿಎಸ್ ಐಸಚಿನ್ ಬಿರಾದಾರ್, ಇಬ್ಬರು ಕಾನ್ಸ್ ಟೇಬಲ್ ಗಳಾದ ಷಣ್ಮುಕ, ವತ್ಸಲಾ ಅವರನ್ನು ಅಮಾನತುಗೊಳಿಸಿ ಎಸ್ ಪಿ ಆದೇಶ ಹೊರಡಿಸಿದ್ದಾರೆ.