
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಸಚಿವರೊಬ್ಬರ ಆಪ್ತರು ಕಾರು ಚಲಾಯಿಸುತ್ತಿದ್ದಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಈಶ್ವರ ಧ್ಯಾನ ಮಂದಿರ ಬಳಿ ನಡೆದಿದೆ.
ಸುರೇಶ್ ಪೈ (42) ಮೃತರು. ಸುರೇಶ್ ಪೈ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತ ಗುತ್ತಿಗೆದಾರರು ಎಂದು ತಿಳಿದುಬಂದಿದೆ.
ಕಾರು ಡ್ರೈವ್ ಮಾಡುತ್ತಿದ್ದಗಲೇ ಸುರೇಶ್ ಪೈ ಅವರು ಹಠಾತ್ ಹೃದಯಾಘಾತದಿಂದ ಸಾವನ್ನಪಿದ್ದು, ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಗೋಡೆಗೆ ಗುದ್ದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.