
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 42 ವರ್ಷ ಆಡಳಿತ ನಡೆಸಿದ ಬಳಿಕ ಮುಂದಿನ ಪೀಳಿಗೆಗೆ ಒಳ್ಳೆಯ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಎಲ್ಲ ಹಿರಿಯರ ಜೊತೆಗೆ ಚರ್ಚಿಸಿ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷ, ರಾಜು ಕಾಗೆ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ರಮೇಶ ಕತ್ತಿ ತಿಳಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಮೊದಲ ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಹಿರಿಯರು ಕೂಡಿಕೊಂಡು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಯಾರೂ ಗೆದ್ದಿಲ್ಲ, ಸೋತಿಲ್ಲ, ಸಹಕಾರಿ ಕ್ಷೇತ್ರ ಗೆದ್ದಿದೆ ಎಂದು ಮಾಜಿ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಈ ಚುನಾವಣೆಯಲ್ಲಿ ಒಂಟಿಯಾದ್ರಾ ರಮೇಶ್ ಕತ್ತಿ ಎಂಬ ಪ್ರಶ್ನೆಗೆ ಯಾರಿಗ್ಯಾರೂ ಒಂಟಿ ಆಗಿಲ್ಲ. ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. 42 ವರ್ಷ ಆಡಳಿತ ನಡೆಸಿದ ಬಳಿಕ ಮುಂದಿನ ಪೀಳಿಗೆಗೆ ಒಳ್ಳೆಯ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಎಲ್ಲ ಹಿರಿಯರ ಜೊತೆಗೆ ಚರ್ಚಿಸಿ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷ, ರಾಜು ಕಾಗೆ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ರಮೇಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ಮಾತಿನ ಸಮರ ಆಗಬಾರದು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಆಗುವ ಸಂರ್ಭದಲ್ಲಿ ಹೊರಗೆ ಇರುವುದು. ಅದೆಲ್ಲಾ ಮುಗಿದ ಮೇಲೆ ಬಂದು ಹೇಳುವುದು. ಇದನ್ನು ಬಿಟ್ಟು ಅವನು ಮತ್ತೇನು ಮಾಡುತ್ತಾನೆ..? ಎರಡು ತಿಂಗಳ ಹಿಂದೆ ಇಬ್ಬರೂ ಮಾತಾಡಿದ್ದೇವು. ರಾಜಕಾರಣ ಎಂದರೆ ಕೊಡಲಿ, ಕುಡಗೋಲು ತೆಗೆದುಕೊಂಡು ನಿಲ್ಲುವುದಕ್ಕೆ ಆಗುತ್ತಾ ಎಂದು ರಮೇಶ ಕತ್ತಿ ಪ್ರಶ್ನಿಸಿದರು.
ಮಾತಿನ ಮೇಲೆ ಹಿಡಿತ ಇರಬೇಕು ಎಂಬ ರಮೇಶ ಜಾರಕಿಹೊಳಿ ಮಾತಿಗೆ ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆ, ರಮೇಶ ಜಾರಕಿಹೊಳಿ ಹೀಗೆ ಹಿರಿಯರು ಯಾರೇ ಸಲಹೆ ಕೊಟ್ಟರೆ, ಅವರ ಅನುಭವದ ಮಾತನ್ನು ಸ್ವೀಕಾರ ಮಾಡಬೇಕಾಗುತ್ತದೆ ಎಂದು ರಮೇಶ ಕತ್ತಿ ಹೇಳಿದರು.
ಅಶ್ವಮೇಧ ಯಾಗ ಕಟ್ಟಿಹಾಕುವುದಾಗಿ ಹೇಳಿದ್ದ ತಮ್ಮ ಹೇಳಿಕೆಗೆ, ‘ಸಹಕಾರಿ ಮತ್ತು ರಾಜಕೀಯ ಕ್ಷೇತ್ರಗಳನ್ನು ಒಂದಕ್ಕೊಂದು ಹೋಲಿಕೆ ಮಾಡುವ ಪ್ರಶ್ನೆ ಬರುವುದಿಲ್ಲ ಎಂದರು.



