ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಡಿಸಿಎಂ ಅಶ್ವಥ ನಾರಾಯಣ ಜವಾಬ್ದಾರಿ ಸ್ಥಾನದಲ್ಲಿರೋರು ದಾಖಲೆ ಇಲ್ಲದೇ ಆರೋಪ ಮಾಡೋದು ಎಷ್ಟು ಸರಿ ಎಂದು ಪ್ರೆಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, 330 ರೂಪಾಯಿಗೆ 1.5 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ. ಆದರೆ, 2100 ಕೊಟ್ಟು ಚೀನಾದಿಂದ ಪಿಪಿಇ ಕಿಟ್ ತಂದಿದ್ದಾರೆ ಅಂತ ಆರೋಪಿಸಿದ್ದಾರೆ. ಆದರೆ, ಮಾರ್ಚ್, ಮೇ ನಲ್ಲಿ ಭಾರತದಲ್ಲಿ ಪಿಪಿಇ ಕಿಟ್ ಉತ್ಪಾದನೆ ಆಗ್ತಿರಲಿಲ್ಲ. ಆ ವೇಳೆ ಚೈನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದ್ವಿ. ಈಗಲೂ 3900 ರೂ.ಗೆ ಫ್ಲಿಪ್ ಕಾರ್ಟ್ ನಲ್ಲಿ ಪಿಪಿಇ ಕಿಟ್ ಮಾರಾಟ ಆಗುತ್ತಿದೆ ಎಂದು ಹೇಳಿದರು.
ವಿಪಕ್ಷ ನಾಯಕರ ಆರೋಪ ರಾಜಕೀಯ ಪ್ರೇರಿತ.ಇವರು ಹಿಂದೆ 21 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ. 15.72 ಲಕ್ಷಕ್ಕೂ ಖರೀದಿ ಮಾಡಿದ್ದಾರೆ. 14.9 ಲಕ್ಷಕ್ಕೂ ಖರೀದಿ ಮಾಡಿದ್ದಾರೆ. ನಾವು 28 ಯುನಿಟ್ ಅನ್ನು 7 ಲಕ್ಷಕ್ಕೆ ಖರೀದಿ ಮಾಡಿದ್ದೇವೆ. 4 ಲಕ್ಷಕ್ಕೆ ತಮಿಳುನಾಡು ಖರೀದಿ ಮಾಡಿದೆ ಅಂತಾ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಸರಿಯಾಗಿ ಹೋಂ ವರ್ಕ್ ಮಾಡದೇ ಆರೋಪ ಮಾಡುತ್ತಿದ್ದಾರೆ ಎಂದರು.
147-97 ರೂ. ಮೊತ್ತದಲ್ಲಿ ಮಾಸ್ಕ್ ಖರೀದಿ ಮಾಡಿದ್ದೇವೆ. ಈಗ ಮಾಸ್ಕ್ 200 ರೂ.ಗೆ ಮಾರಾಟವಾಗ್ತಿದೆ. ಸ್ಯಾನಿಟೈಸರ್ ಬಗ್ಗೆ ಕೋವಿಡ್ ಸಮಯದಲ್ಲಿ ಎಸ್ಎಂ ಕಂಪನಿಯಿಂದ ಖರೀದಿ ಮಾಡಿಯೇ ಇಲ್ಲ. 500 ಎಂಎಲ್ ಸ್ಯಾನಿಟೈಸರ್ ಅನ್ನು 250 ರೂ.ಗೆ ಖರೀದಿ ಮಾಡಿದ್ದೇವೆ. ಆಕ್ಸಿಜೆನ್ ದುಡ್ಡು ಕೊಟ್ಟು ಖರೀದಿಸಿಲ್ಲ ಎಂದು ಹೇಳಿದರು.
ಸ್ಕ್ಯಾನ್ ರೇ ಕಂಪನಿ ಮೈಸೂರು ಇವರಿಂದ 7.28 ಕೋಟಿಗೆ 130 ವೆಂಟಿಲೇಟರ್, ಕೆಕೆ ಅಲಿನೇಜ್ನಿಂದ 12.32 ಲಕ್ಷಕ್ಕೆ 10 ವೆಂಟಿಲೇಟರ್ ಕೇಳಲಾಗಿದ್ದು, 8 ಪೂರೈಕೆ ಮಾಡಿದ್ದಾರೆ. ಬಯೋ ಮೆಡಿಕ್ಸ್ ವೆಂಟಿಲೇಟರ್ ಕೊಟ್ಟಿಲ್ಲ. ಹೋ ಮೆಡಿಕ್ಸ್ – 13.44 ಲಕ್ಷಕ್ಕೆ 5 ವೆಂಟಿಲೇಟರ್ ನೀಡಿದ್ದಾರೆ ಎಂದು ಹೇಳಿದ ಅಶ್ವಥ್ ನಾರಾಯಣ ಅವರು, 2019ರಲ್ಲಿ 14 ಲಕ್ಷಕ್ಕೆ ಚೆನ್ನೈ ಗೆ ನೀಡಿದ್ದಾರೆ. ನಮಗೆ 4 ಲಕ್ಷಕ್ಕೆ ನೀಡಿದ್ದಾರೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ