![](https://pragativahini.com/wp-content/uploads/2025/01/dkc-Temple-visit.jpg)
ಪ್ರಗತಿವಾಹಿನಿ ಸುದ್ದಿ : ಪ್ರಯಾಗ್ ರಾಜ್ ನ ಮಹಾಕುಂಭಮೇಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಯಾಣ ಬೆಳೆಸಿದ್ದಾರೆ. ಮುಂಜಾನೆ 5:30ಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಕುಟುಂಬದೊಂದಿಗೆ ಡಿಕೆಶಿ ತೆರಳಿದ್ದಾರೆ.
ಮಹಾಕುಂಭಮೇಳಕ್ಕೆ ಹೋಗುವ ಮುನ್ನ ಸದಾಶಿವ ನಗರದ ಮನೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ನಮ್ಮ ಧರ್ಮದ ನಂಬಿಕೆಯಿಂದ ಇವತ್ತು ಕುಂಭಮೇಳಕ್ಕೆ ಹೋಗುತ್ತಿದ್ದೇನೆ ಎಂದಿದ್ದಾರೆ. ಕುಟುಂಬ ಸದಸ್ಯರು ಕೂಡ ಡಿಕೆಶಿಗೆ ಸಾಥ್ ನೀಡಿದ್ದಾರೆ.
ಇನ್ನು ಮೈಸೂರಿನ ಟಿ.ನರಸೀಪುರ ಕುಂಭಮೇಳದಲ್ಲೂ ಭಾಗವಹಿಸುತ್ತೇನೆ. ಡಿಸಿ, ಎಸ್ಪಿ ಸೇರಿ ಮೈಸೂರಿನವರು ಬಂದಿದ್ದರು. ಅಲ್ಲಿನ ಕುಂಭಮೇಳಕ್ಕೂ ಹೋಗುತ್ತೇನೆ. ಸ್ವಾಮಿಜಿಗಳ ಜತೆ ಎಲ್ಲಾ ಮಾತನಾಡಿದ್ದೇವೆ. ಅವರು ಕೂಡ ಎಲ್ಲಾ ಬರುತ್ತಿದ್ದಾರೆ. ನಮ್ಮ ಕರ್ನಾಟದ ಕಾವೇರಿ ಕುಂಭಮೇಳ ಯಶಸ್ವಿಯಾಗಲು ಪ್ರಯತ್ನ ಪಡುತ್ತೇವೆ ಎಂದು ತಿಳಿಸಿದರು.
ಡಿಕೆಶಿ ಪುತ್ರಿ ಐಶ್ವರ್ಯ ಫೆ.7ರಂದು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ ಸುಂದರ ಕ್ಷಣಗಳ ವೀಡಿಯೋವನ್ನು ಅವರು ಹಂಚಿಕೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ