Latest

ಅದ್ಧೂರಿಯಾಗಿ ನಡೆದ ಝುಂಜರವಾಡ ಜಾತ್ರೆ

ಪ್ರಗತಿವಾಹಿನಿ ಸುದ್ದಿ, ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಅಪ್ಪಯ್ಯ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಮತ್ತು ಶ್ರದ್ಧೆಗಳಿಂದ ಅದ್ದೂರಿಯಾಗಿ ನೆರವೇರಿತು.

ಬೌದ್ಧ ಹುಣ್ಣಿಮೆ ಹಬ್ಬದ ದಿನದಂದು ನಡೆಯುವ ಶ್ರೀ ಅಪ್ಪಯ್ಯ ಸ್ವಾಮಿ ರಥೋತ್ಸವಕ್ಕೆ ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಹುಣ್ಣಿಮೆಯ ದಿವಸ ಅಪ್ಪಯ್ಯಸ್ವಾಮಿ ಹಾಗೂ ಚಂದ್ರಯ್ಯ ಸ್ವಾಮಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.

ರಥೋತ್ಸವ ಎಳೇಯುವ ಮುಂಚೆ ಕುದುರೆ ಕುಣಿತ ನವಿಲು ಕುಣಿತ ಗರಡು ವೇಷಧಾರಿಗಳು ಮರಗಾಲು ಕುಣಿತ ಜಾತ್ರೆಗೆ ಮೆರಗು ತರುತ್ತಾರೆ.

Home add -Advt

ಅದರ ಜೊತೆ ಜೊತೆಗೇ ಜವಾರಿ ವಾದ್ಯ ಕರಡಿ ಮಜಲು ವಾದ್ಯಗಳು ಮೈ ರೋಮಾಂಚನಗೊಳಿಸುವ ಜೊತೆಗೆ ಭಕ್ತಿ ಮತ್ತಷ್ಟು ಹೆಚ್ಚಿಸುತ್ತದೆ.

ಬಬಲಾದಿ ಶಾಖಾಮಠದ ಮತ್ತು ಬಬಲಾದಿ ಕಿರಿಯ ಗುರುಜಿ ಯಾದ ಅಡಿವೆಪ್ಪ ಸ್ವಾಮಿಜಿ ಸಮ್ಮುಖದಲ್ಲಿ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು. ದೇವಸ್ಥಾನ ದಿಂದ ರಥೋತ್ಸವ ನಡೆಯುವ ಸ್ಥಳದ ವರೆಗೆ ಗುರೂಜಿಯವರನ್ನ ಭಕ್ತಾದಿಗಳು ಹೆಗಲ ಮೇಲೆ ಹೊತ್ತು ಹೋಗುವುದು ವಿಶೇಷವಾಗಿದೆ.

ರಥೋತ್ಸವ ತೇರನ್ನು ಎಳೆಯುವ ವೇಳೆ ಅಪ್ಪಯ್ಯಸ್ವಾಮಿಜಿ ಕಿ ಜೈ ಮತ್ತು ಮೂರು ಲೋಕ ಪುಂಡಿ ಪತಾಕಿ ದೋಸ್ತೋಂ ದಿನ್ನ ಎಂದು ನಾಮಸ್ಮರಣೆ ಜಯಘೋಷ ಮುಗಿಲು ಮುಟ್ಟಿತು. ಇದೆ ಸಂದರ್ಭದಲ್ಲಿ ರಥಕ್ಕೆ ಕಾರಿಕು, ಬೆತ್ತಾಸ ಎಸೆದು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ಜಾತ್ರೆಗೆ ಬಂದ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು .

ಆಹಾರ ಪದಾರ್ಥಗಳಿಗೆ ಗುರೂಜಿಯವರು ಅಪ್ಪಯ್ಯ ಸ್ವಾಮಿಯ ಪ್ರಸಾದವನ್ನು ಹಾಕುವ ಮೂಲಕ ಊಟಕ್ಕೆ ಚಾಲನೆ ನೀಡಿದರು.

ಈ ಸಮಯದಲ್ಲಿ ಭಾರೀ ಪ್ರಮಾಣದ ಜನರು ಸೇರುವುದರಿಂದ ಬಹಳಷ್ಟು ಸಂಖ್ಯೆಯಲ್ಲಿ ಬೆಂಡು, ಬೆತ್ತಾಸು ಮುಂತಾದ ಸಿಹಿ ತಿಂಡಿಗಳನ್ನು ಮಾರುವ ಅಂಗಡಿಗಳು ಕಾಣಿಸುತ್ತವೆ. ಜಾತ್ರೆಗೆ ಬಂದ ಜನರು ದೇವರ ದರ್ಶನ ಪಡೆದು ಬಳಿಕ ಅಂಗಡಿಗಳ ಮುಂದೆ ಸಿಹಿತಿನಿಸುಗಳನ್ನು ಕೊಳ್ಳಲು ಸಾಲುಗಟ್ಟಿ ನಿಲ್ಲುವರು.

ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಐಗಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

Related Articles

Back to top button