ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ ಒಂದು ಪ್ರಶ್ನೆಗೂ ಸರಿಯಾಗಿ ಉತ್ತರಿಸದೆ ಪದೆ ಪದೆ ನಗೆಪಾಟಲಿಗೀಡಾದ ಘಟನೆ ಮೈಸೂರಿನಲ್ಲಿ ನಡೆಯಿತು.
ಶುಕ್ರವಾರ ಮುಖ್ಯಂತ್ರಿಗಳು ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದೆ ಡಿಡಿಪಿಐ ವಿಪರೀತ ನಗೆಪಾಟಲುಗೆ ಈಡಾದರು.
ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆಯೇ ಎಂದು ಸಿಎಂ ಕೇಳಿದ ಪ್ರಶ್ನೆಗೆ ಹೂಂ ಸಾರ್- ಇಲ್ಲ ಸಾರ್ ಎಂದು ಉತ್ತರಿಸಿದರು.
ನಿಮ್ಮ ಮಾತನ್ನು ಖಾಸಗಿ ಶಾಲೆಗಳವರು ಕೇಳುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಸಾರ್ ಎಂದು ಡಿಡಿಪಿಐ ಉತ್ತರಿಸಿದ್ದಕ್ಕೆ ಇಡೀ ಸಭೆ ನಗೆಗಡಲಲ್ಲಿ ತೇಲಿತು.
ಯಾವುದಾದರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ ಎಂದು ಸಿಎಂ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಡಿಡಿಪಿಐ ತಡಬಡಾಯಿಸಿದರು. ಆಗ ಮುಖ್ಯಮಂತ್ರಿಗಳೇ ಯಾವುದೇ ಒಂದು ಸ್ಕೂಲ್ ಹೆಸರು ಹೇಳಪ್ಪಾ ಹೋಗ್ಲಿ ಎಂದರು. ಆಗಲೂ ಸಭೆ ನಗೆಗಡಲಲ್ಲಿ ತೇಲಿತು.
ಬೇಸತ್ತ ಮುಖ್ಯಮಂತ್ರಿಗಳು ನೀವು ಕಷ್ಟಪಟ್ಟು ಓದಿದ್ದೀರಾ ಎಂದು ಕೇಳಿದರೆ, ಇಲ್ಲ ಸಾರ್ ಎನ್ನುವ ಉತ್ತರ ಡಿಡಿಪಿಐ ಅವರಿಂದ ಬಂತು. ಆಗಲೂ ಸಭೆ ನಗೆ ಗಡಲಲ್ಲಿ ತೇಲಿತು.
ಕೊನೆಗೆ ಒಂದು ವಾರದಲ್ಲಿ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಖಡಕ್ ಆಗಿ ಡಿಡಿಪಿಐಗೆ ಸಿಎಂ ಸೂಚನೆ ನೀಡಿದರು.
ಈರುಳ್ಳಿ ಬಜ್ಜಿ ಇಲ್ವಾ, ಇದ್ರೆ ಕೊಡು
ಸುದೀರ್ಘ ಸಭೆ ಸಂಜೆ ೫:೩೦ ಆದರೂ ಮುಂದುವರೆದಿತ್ತು. ಈ ವೇಳೆ ಮೆಣಸಿನ ಕಾಯಿ ಬಜ್ಜಿಯನ್ನು ಸಂಜೆಯ ತಿಂಡಿಗಾಗಿ ವಿತರಿಸಲಾಯಿತು. ತಮಗೆ ಮೆಣಸಿನಕಾಯಿ ಬಜ್ಜಿ ನೀಡಲು ಬಂದವರಿಗೆ ಮುಖ್ಯಮಂತ್ರಿಗಳು, “ಏಯ್ ಈರುಳ್ಳಿ ಬಜ್ಜಿ ಇಲ್ವಾ ಎಂದು ಕೇಳಿ, ಇದ್ದರೆ ಕೊಡು ಎಂದರು. ಆಮೇಲೆ ಮೆಣಸಿನಕಾಯಿ ಬಜ್ಜಿಯನ್ನೂ ಬಾಯಿಗೆ ಹಾಕಿ ಸವಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ