ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಸ್ಥಳೀಯ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಕ್ಷರ ದಾಸೋಹ ಕೇಂದ್ರಕ್ಕೆ ಭೇಟಿನೀಡಿ ಅಕ್ಷರ ದಾಸೋಹ ಕೇಂದ್ರದ ಆಹಾರವನ್ನು ಪರೀಕ್ಷಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಸುಮಾರು ಅರವತೈದು ಸಾವಿರ ಮಕ್ಕಳಿಗೆ 304 ಶಾಲೆಗಳಿಗೆ ಸಂಸ್ಥೆ ನಿರ್ವಹಿಸುತ್ತಾ ಬಂದಿದೆ.
ಎಲ್ಲಾ ಅಕ್ಷರ ದಾಸೋಹ ನಡೆಸುವ ಸ್ವಯಂಸೇವಾ ಸಂಸ್ಥೆಗಳು ಮತ್ತು ಶಾಲೆಯಲ್ಲಿ ಬಿಸಿಊಟವನ್ನು ತಯಾರಿಸುವ ಎಲ್ಲಾ ಸಿಬ್ಬಂದಿ ಮಕ್ಕಳ ಬಗ್ಗೆ ಕಾಳಜಿಯನ್ನು ಮತ್ತು ಅಚ್ಚುಕಟ್ಟಾಗಿ ಯೋಜನೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದು ಕರೆ ನೀಡಿದರು.
ಅಕ್ಷರ ದಾಸೋಹದಿಂದ ಮತ್ತು ಕ್ಷೀರ ಭಾಗ್ಯ ಯೋಜನೆಯಿಂದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು ಆರೋಗ್ಯವಂತರಾಗಿರಬೇಕು. ಅವರಿಗೆ ಯೋಗ್ಯ ಶಿಕ್ಷಣದ ಜೊತೆ ಉತ್ತಮ ಆಹಾರ ಕೊಡುವುದು ಸರಕಾರದ ಕಾರ್ಯವಾಗಿದೆ ಎಂದ ಗಜಾನನ ಮನ್ನಿಕೇರಿ ಅವರು, ತಾವೆ ಸ್ವತಃ ಅಕ್ಷರದಾಸೋಹ ಯೋಜನೆಯ ಆಹಾರವನ್ನು ಸ್ವೀಕರಿಸಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಕ್ಷರ ದಾಸೋಹ ಯೋಜನೆ ಬಹುದೊಡ್ಡ ಯೋಜನೆ. ಇವುಗಳನ್ನು ಅಚ್ಚುಕಟ್ಟಾಗಿ ಮಾಡುವದರೊಂದಿಗೆ ಸರಕಾರದ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಹುಕ್ಕೇರಿ ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ