ಮೈನಸ್ 4 ಡಿಗ್ರಿ ಉಷ್ಣಾಂಶದಲ್ಲಿ ಮೃತದೇಹ: ಅಲಂಕೃತ ಸೇನಾ ವಾಹನದಲ್ಲಿ ಪಾರ್ಥಿವ ಶರೀರ ಮೆರವಣಿಗೆ; 3 ಕ್ವಿಂಟಾಲ್ ಹೂವಿನಿಂದ ಅಲಂಕಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿನ್ನೆ ರಾತ್ರಿ ನಿಧನರಾದ ಸಚಿವ ಉಮೇಶ ಕತ್ತಿ ಪಾರ್ಥಿವ ಶರೀರಾದ ಆಗಮನಕ್ಕಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಯಲಾಗುತ್ತಿದೆ. ಅವರ ಅಭಿಮಾನಿಗಳು ದುಃಖದಿಂದ ಕಣ್ಣೀರು ಹಾಕುತ್ತ ಮೃತದೇಹ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ.
ಸಾಂಬ್ರಾದಿಂದ ಬೆಲ್ಲದ ಬಾಗೇವಾಡಿಗೆ ಮೃತದೇಹವನ್ನು ಅಲಂಕೃತ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಕೊೆಂಡೊಯ್ಯಲಾಗುತ್ತಿದೆ. ಇದಕ್ಕಾಗಿ ವಾಹನವನ್ನು ಸುಮಾರು 3 ಕ್ವಿಂಟಾಲ್ ಮಲ್ಲಿಗೆ ಮತ್ತೆ ಗೊಂಡೆ ಹೂವಿನಿಂದ ಅಲಂಕಾರ ಮಾಡಲಾಗಿದೆ.
ಮೃತದೇಹವನ್ನು ಮೈನಸ್ 4 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದ ಪೆಟ್ಟಿಗೆಯಲ್ಲಿಟ್ಟು ಬೆಲ್ಲದ ಬಾಗೇವಾಡಿಗೆ ಒಯ್ಯಲಾಗುತ್ತಿದೆ. ತಜ್ಞ ವೈದ್ಯರು ಸಹ ವಿಮಾನ ನಿಲ್ದಾಣದಲ್ಲಿ ಸಜ್ಜಾಗಿದ್ದಾರೆ.
ಸಂಜೆ 5 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಉಮೇಶ ಕತ್ತಿ ಅವರ ತಂದೆ ವಿಶ್ವನಾಥ ಕತ್ತಿ ಮತ್ತು ತಾಯಿ ರಾಜೇಶ್ವರಿ ಅವರ ಅಂತ್ಯ ಸಂಸ್ಕಾರ ನಡೆದ ಅವರ ತೋಟದಲ್ಲೇ ಉಮೇಶ ಕತ್ತಿ ಅವರ ಅಂತ್ಯಸಂಸ್ಕಾರ ಸಹ ನಡೆಯಲಿದೆ.
https://pragati.taskdun.com/latest/to-belgaum-by-special-flight-umesh-katthis-mortal-remains-will-be-taken-in-a-procession-from-sambra-airport/
https://pragati.taskdun.com/latest/umesh-katthi-funeral-at-5-pm-on-wednesday-cm-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ