Kannada NewsKarnataka News

12 ಮಹಿಳೆಯರ ಸನ್ಮಾನದ ಮೂಲಕ ದೀನ್ ದಯಾಳ್ ಜನ್ಮದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 12 ಮಹಿಳೆಯರನ್ನು ಸನ್ಮಾನಿಸುವ ಮೂಲಕ ಬಿಜೆಪಿಯ ಮಹಿಳಾ ಪ್ರಮುಖರು ಪಂಡಿತ ದೀನ್ ದಯಾಳ್ ಜನ್ಮ ದಿನ ಆಚರಿಸಿದರು.

 ಬೆನಕನಹಳ್ಳಿಯ ಬೂತ್ ಮತ್ತು ಕಾರ್ಯಕಾರಿಣಿ ಸದಸ್ಯೆ ಜ್ಯೋತಿ ಕುಲಕರ್ಣಿ, ತಾಲೂಕು ಪಂಚಾಯಿತಿ ಸದಸ್ಯೆ ರಂಜನಾ ಕೋಲ್ಕರ್, ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ ಸೋನಾಲಿ ಸರ್ನೋಬತ್   ದೀನ್ ದಯಾಳ್ ಉಪಾಧ್ಯಾಯರ 105 ನೇ ಜಯಂತಿಯನ್ನು ಆಯೋಜಿಸಿದ್ದರು.  ಶಹೀದ್ ವಿಧವೆಯರು,  ಸೈನಿಕರು, ಅಂಗನವಾಡಿ ಶಿಕ್ಷಕರು, ಹಿರಿಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಸೇರಿದಂತೆ  12 ಮಹಿಳೆಯರನ್ನು ಸನ್ಮಾನಿಸಲಾಯಿತು.
ಜ್ಯೋತಿ ಕುಲಕರ್ಣಿ ಎಲ್ಲರನ್ನೂ ಸ್ವಾಗತಿಸಿದರು, ಡಾ ಸೋನಾಲಿ ಸರ್ನೋಬತ್ ಅವರು ಅಂತ್ಯೋದಯ ಪರಿಕಲ್ಪನೆ ಹಾಗೂ ನಮ್ಮ ರಾಷ್ಟ್ರಕ್ಕೆ ಸೇನೆಯ ಕೊಡುಗೆಗಳ ಕುರಿತು ಮಾತನಾಡಿದರು.
ರಂಜನಾ ಕೋಲ್ಕರ್ ವಂದನಾರ್ಪಣೆ ಮಾಡಿದರು.
ಪಂಡೀತ್ ದೀನ್ ದಯಾಳ ಉಪಾಧ್ಯಾಯರ 105 ನೇ ಜನ್ಮ ದಿನಾಚರಣೆಯಲ್ಲಿ 105 ದೀಪಗಳನ್ನು ಬೆಳಗಿಸಲಾಯಿತು.

ಖಾನಾಪುರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ: ಸಿಎಂ ಭೇಟಿಯಾದ ಡಾ.ಸೋನಾಲಿ ಸರ್ನೋಬತ್ ಮನವಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button