ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾಂತೇಶ ನಗರದ ಶಶಿಕಲಾ ಸಂಗಪ್ಪ ಆದಿ ಅವರು ಬುಧವಾರ ದಿನಾಂಕ ೧೨ ಜನೆವರಿ ೨೦೨೨ ರಂದು ಲಿಂಗೈಕ್ಯರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಹೆಸರಾಂತ ಹೋಮಿಯೋಪತಿ ತಜ್ಞ ಡಾ.ಸಂಗಪ್ಪ ಆದಿ ಅವರ ಪತ್ನಿಯಾಗಿದ್ದರು. ಇವರ ಅಂತ್ಯಕ್ರಿಯೆಯನ್ನು ಸದಾಶಿವ ನಗರ ಸ್ಮಶಾನ ಭೂಮಿಯಲ್ಲಿ ಬುಧವಾರ ನೆರವೇರಿಸಲಾಯಿತು. ಶಶಿಕಲಾ ಆದಿ ಅವರಿಗೆ ಪತಿ,ಓರ್ವ ಪುತ್ರ, ಸೊಸೆ, ನಾಲ್ವರು ಹೆಣ್ಣು ಮಕ್ಕಳು , ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ