Latest

ದೀಪಾ ಚೋಳನ್ ತಂದೆ, ತಾಯಿ ಕೊರೋನಾಗೆ ಬಲಿ

ರಾಜೇಂದ್ರ ಚೋಳನ್ ತಂದೆ, ತಾಯಿಗೂ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಐಎಎಸ್ ಅಧಿಕಾರಿ ದೀಪಾ ಚೋಳನ್ ತಂದೆ, ತಾಯಿ ಇಬ್ಬರೂ ಕೊರೋನಾಕ್ಕೆ ಬಲಿಯಾಗಿದ್ದಾರೆ.

ಅವರ ಪತಿ ರಾಜೇಂದ್ರ ಚೋಳನ್ ತಂದೆ, ತಾಯಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಆದರೆ ಪತಿ, ಪತ್ನಿ ಇಬ್ಬರೂ ತಮ್ಮ ಪಾಲಕರನ್ನು ನೋಡಲು ಹೋಗಲು ಸಾಧ್ಯವೇ ಆಗಿಲ್ಲ.

ಕೊರೋನಾ ಎಂತೆಂಥವರನ್ನು ಬಲಿ ತೆಗೆದುಕೊಂಡಿದೆ, ಎಂತೆಂಥವರನ್ನು ವಿಚಿತ್ರ ಸಂಕಷ್ಟಕ್ಕೆ ದೂಡಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

Home add -Advt

ಇಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದರೂ, ಎಲ್ಲ ಸೌಲಭ್ಯಗಳಿದ್ದರೂ ತಂದೆ, ತಾಯಿ ಸಂಕಷ್ಟದಲ್ಲಿದ್ದಾಗ, ಮೃತರಾದಾಗ ನೋಡಲು ಕೂಡ ಸಾಧ್ಯವಾಗದ ಪರಿಸ್ಥಿತಿ.

  ದೀಪಾ ಚೋಳನ್ ತಂದೆ, ತಾಯಿ ಇಬ್ಬರಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ 10 ದಿನಗಳ ಅಂತರದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.

ಆದರೆ ದೀಪಾ ಆಗಲಿ, ಬೆಂಗಳೂರು ಮಹಾನಗರದ ಕೊರೋನಾ ಜವಾಬ್ದಾರಿ ಹೊತ್ತಿರುವ ಅವರ ಪತಿ ರಾಜೇಂದ್ರ ಚೋಳನ್‌  ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ.

ರಾಜೇಂದ್ರ ಚೋಳನ್ ತಂದೆ, ತಾಯಿಗೂ ಕೊವಿಡ್ ಧೃಡಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಆಸ್ಪತ್ರೆಯಲ್ಲಿ  ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರನ್ನು ನೋಡಲು ಕೂಡ ಚೋಳನ್ ದಂಪತಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಜೂನ್ 7ರ ಬಳಿಕ ಅನ್ ಲಾಕ್ ನಿಶ್ಚಿತ, ಆದರೆ…. – ಡಿಸಿಎಂ ಅಶ್ವತ್ಥನಾರಾಯಣ ಸ್ಪಷ್ಟನೆ

Related Articles

Back to top button