Kannada NewsLatest

ಅತ್ಯಾಚಾರಿ, ಕೊಲೆಗಡುಕನಿಗೆ ಮರಣದಂಡನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವಿಧವೆಗೆ ಜನತಾ ಮನೆ ಕೊಡಿಸುವುದಾಗಿ ಹೇಳಿ ನಂಬಿಸಿ, ಅತ್ಯಾಚಾರ ಮಾಡಿ ಕೊಲೆಗೈದ  ವ್ಯಕ್ತಿಗೆ ಮರಣ ದಂಡನೆ ವಿಧಿಸಲಾಗಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಬಿ.ಸೂರ್ಯವಂಶಿ ಇಂದು ತೀರ್ಪು ನೀಡಿದರು.

ನಿಪ್ಪಾಣಿ ಬಳಿಯ ಖಡಕಲಾಟದ ರಮೇಶ ಅಲಿಯಾಸ್ ರಾಮಾ ಲಕ್ಷ್ಮಣ ಜಾಧವ ಅಪರಾಧಿ.

Home add -Advt

ರಮೇಶ್ 2016ರಲ್ಲಿ ಅದೇ ಊರಿನ ವಿಧವೆಗೆ ಮನೆ ಕೊಡಿಸುವುದಾಗಿ ನಂಬಿಸಿ ಸ್ಥಳೀಯ ಕಾಲೇಜಿನ ಬಳಿ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದ.

ಆಕೆ ಮನೆಯಲ್ಲಿ ಹೇಳುವುದಾಗಿ ಬೆದರಿಸಿದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿದ್ದ ನಿಪ್ಪಾಣಿ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.

ಒಂದು ಸೆಕ್ಷನ್ ಪ್ರಕಾರ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ಹಾಗೂ ಇನ್ನೊಂದು ಸೆಕ್ಷನ್ ಪ್ರಕಾರ ಮರಣದಂಡನೆ ವಿಧಿಸಲಾಗಿದೆ.

ಸರಕಾರಿ ಅಭಿಯೋಜಕ ಕಿರಣ ಪಾಟೀಲ ಸರಕಾರದ ಪರ ವಾದಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button