ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ – ಶನಿವಾರ ಯಕ್ಸಂಬಾ ಪಟ್ಟಣದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ನಿಯೋಜಿತ ಬಸವಜ್ಯೋತಿ ಫಾರ್ಮರ ಪ್ರೊಡ್ಯುಸರ್ ಆರ್ಗನೈಜೇಶನ್ಸ್ ಸೊಸಾಯಿಟಿ ನಿರ್ದೇಶಕರ ಸಭೆ ನಡೆಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರು ಭಾರತದಲ್ಲಿ ೧೦,೦೦೦ ರೈತ ಉತ್ಪಾದಕರ ಸಂಘ ಸ್ಥಾಪನೆ ಮಾಡಲು ಗುರಿಹೊಂದಿದ್ದು ಆ ನಿಟ್ಟಿನಲ್ಲಿ ಯಕ್ಸಂಬಾ ಪಟ್ಟಣದಲ್ಲಿ ೧ ಸೊಸಾಯಿಟಿ ತೆರೆಯಲು ನಿರ್ಣಯಿಸಿದ್ದೇವೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ನವದೆಹಲಿ ಇದರ ಸಹಯೋಗದಿಂದ ಸ್ಥಾಪಿಸುತ್ತಿದ್ದೇವೆ. ಮುಖ್ಯ ಪ್ರವರ್ತಕರಾಗಿ ಬಸವಪ್ರಸಾದ ಜೊಲ್ಲೆ ಹಾಗೂ ನಿರ್ದೇಶಕರ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಂಘವು ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ತಾಂತ್ರಿಕ ಸಹಯೋಗದೊಂದಿಗೆ ಸ್ಥಾಪಿಸುತ್ತಿದ್ದೇವೆ. ಸಹಕಾರ ಇಲಾಖೆಯಿಂದ ಶೇರ ಹಣ ಸಂಗ್ರಹಣೆಗೆ ಅನುಮತಿ ನೀಡಿರುತ್ತಾರೆ. ಶೇರ ಹಣ ೧೧೨೫/- ರೂ ಸಂಗ್ರಹಿಸಲು ತೀರ್ಮಾನಿಸಿ ಶೇರು ಬಿಡುಗಡೆಗೊಳಸಲಾಯಿತು. ಇಚ್ಛೆಯುಳ್ಳವರು ಸಂಘದ ಕಚೇರಿಯಲ್ಲಿ ಹಾಗೂ ಆಹಾರ ನಿರ್ದೇಶಕರಲ್ಲಿ ಹಾಗೂ ರೈತ ಉತ್ಪಾದಕರ ಸಂಘದ ನಿರ್ದೇಶಕರಲ್ಲಿ ಮತ್ತು ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಶೇರನ್ನು ತೆಗೆದುಕೊಳ್ಳಬಹುದು. ಯಕ್ಸಂಬಾ, ಯಾದನವಾಡಿ, ಕಲ್ಲೋಳ, ನನದಿ, ನಣದಿವಾಡಿ, ನಾಗರಳ ಹಿರೇಕುಡಿ, ಉಳ್ಳಾಗಡ್ಡಿವಾಡಿ ವ್ಯಾಪ್ತಿಗೆ ಒಳಗೊಂಡಿದೆ. ಈ ಸೊಸಾಯಿಟಿ ಉದ್ದೇಶಗಳು ರೈತರ ಉತ್ಪಾದನೆ ಹೆಚ್ಚಿಸುವದರೊಂದಿಗೆ ಖರ್ಚು ಕಡಿಮೆ ಮಾಡುವುದು, ರೈತರ ಉತ್ಪನ್ನಗಳನ್ನು ಸಂಸ್ಕರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುವುದು. ರೈತರು ಸಂಘಟಿತವಾಗಿ ತಮ್ಮ ಉತ್ಪನ್ನಕ್ಕೆ ಹೆಚ್ಚು ಬೆಲೆ ಬರುವಂತೆ ಪ್ರೇರಿಪಿಸುವುದಾಗಿದೆ.
ನಿಯೋಜಿತ ಬಸವಜ್ಯೋತಿ ರೈತ ಉತ್ಪಾದಕರ ಸೊಸಾಯಿಟಿ ನಿರ್ದೇಶಕರಾಗಿ ಯಕ್ಸಂಬಾ ಗ್ರಾಮದ ಬಸವಪ್ರಸಾದ ಜೊಲ್ಲೆ, ಶ್ರೀ ಸುಭಾಷ ಕುಂಬಾರ, ಸಂತೋಷ ಶಿಂಧೆ, ಯಾದನವಾಡಿ ಗ್ರಾಮದ ಶೇಖರ ಖೋತ, ಕಲ್ಲೊಳ ಗ್ರಾಮದ ನೇಮಿನಾಥ ಪಟ್ಟಣಕುಡೆ, ಕುಮಾರ ಅವಟೆ, ನನದಿವಾಡಿ ಗ್ರಾಮದ ಸುರೇಶ ಖೋತ, ನನದಿ ಗ್ರಾಮದ ಮಧುಕರ ಕೋಕಣೆ, ಮಹಾಂತೇಶ ವಡ್ಡರ, ಉಳ್ಳಾಗಡ್ಡಿ ಗ್ರಾಮದ ಆಶಾದೇವಿ ರಾಯಜಾಧವ, ನಾಗರಾಳ ಗ್ರಾಮದ ಶಿವಾನಂದ ಹಿಂಗ್ಲಜೆ, ಹಿರೇಕುಡಿ ಗ್ರಾಮದ ಸದಾಶಿವ ಕಮತೆ, ಮಲ್ಲಪ್ಪ ಚೌಗಲಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಕಲ್ಲಪ್ಪ ಜಾಧವ ಬೀರೇಶ್ವರ ಸಂಸ್ಥೆಯ ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಜ್ಞಾನಿಗಳು, ಸಸ್ಯ ಸಂರಕ್ಷಣರಾದ ಧನಂಜಯ ಚೌಗಲಾ, ಉಪಸ್ಥಿತರಿದ್ದರು.
ಸರ್ ನಿಮಗೆ ಎಷ್ಟು ಬಾರಿ ಹೇಳಬೇಕು? ಪದೇ ಪದೇ ಹೇಳಿಸಿಕೊಳ್ಳುವುದು ಅಸಹ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ