Kannada NewsKarnataka NewsLatest

ಬೆಳಗಾವಿ: 21 ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ ದಿನಾಂಕ ಘೋಷಣೆ

 ಕದನ ಕುತೂಹಲ ಪ್ರಾರಂಭ

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ

ಜಿಲ್ಲೆಯಲ್ಲಿ ನಾನಾ ಕಾರಣಗಳಿಗೆ ತೆರವಾದ ವಿವಿಧ ಗ್ರಾಪಂಗಳ ಒಟ್ಟು ೨೧ ಸದಸ್ಯ ಸ್ಥಾನಗಳಿಗೆ ಮೇ ೨೦ ರಂದು ಉಪ ಚುನಾವಣೆ ನಡೆಯಲಿದ್ದು ವೇಳಾಪಟ್ಟಿ ನಿಗದಿಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಪಂನ ಸಂತಿ ಬಸ್ತವಾಡ ವಾರ್ಡ್, (ಅನುಸೂಚಿತ ಪಂಗಡ ಮೀಸಲಾತಿ), ಅರಳಿಕಟ್ಟಿ ಗ್ರಾಪಂನ ಅರಳಿಕಟ್ಟಿ ವಾರ್ಡ್ (ಅನುಸೂಚಿತ ಪಂಗಡ ಮಹಿಳೆ ), ನಂದಿಹಳ್ಳಿ ಗ್ರಾಪಂನ ನಂದಿಹಳ್ಳಿ ವಾರ್ಡ್ (ಅನುಸೂಚಿತ ಪಂಗಡ ಮಹಿಳೆ),

ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಪಂನ ಸೊಲ್ಲಾಪುರ ವಾರ್ಡ್ (ಅನುಸೂಚಿತ ಜಾತಿ), ಮಾವನೂರು ಗ್ರಾಪಂನ ಮಾವನೂರು ವಾರ್ಡ್ (ಸಾಮಾನ್ಯ), ಠಾಣಾ ಹತ್ತರಗಿ ಗ್ರಾಪಂನ ಹತ್ತರಗಿ ಆರ್ ಸಿ ವಾರ್ಡ್ (ಸಾಮಾನ್ಯ ಮಹಿಳೆ), ಶಿಢಾಣ ಗ್ರಾಪಂನ ಶಿರಢಾಣ ವಾರ್ಡ್ (ಅನುಸೂಚಿತ ಪಂಗಡ ಮಹಿಳೆ ),

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಪಂನ ಅಂಕಲಿ ವಾರ್ಡ್( ಪರಿಶಿಷ್ಟ ಜಾತಿ ಮಹಿಳೆ), ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಪಂನ ಸವಸುದ್ದಿ ವಾರ್ಡ್ (ಸಾಮಾನ್ಯ ),

ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಪಂನ ಜನವಾಡ ವಾರ್ಡ್‌ನ ೨ ಸ್ಥಾನಗಳಿಗೆ (ಒಂದು ಸಾಮಾನ್ಯ ಮಹಿಳೆ, ಒಂದು ಹಿಂದುಳಿದ ಬ ಮಹಿಳೆ, ) ಅಥಣಿ ಗ್ರಾಮೀಣದ ಬಸವನಗುಡಿ ತೋಟ ವಾರ್ಡ್ (ಸಾಮಾನ್ಯ), ಕೊಕಟನೂರ ಗ್ರಾಪಂನ ಕೊಕಟನೂರ ವಾರ್ಡ್ (ಸಾಮಾನ್ಯ),

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಪಂನ ಬೆಳವಡಿ ವಾರ್ಡ್ (ಸಾಮಾನ್ಯ), ವಕ್ಕುಂದ ಗ್ರಾಪಂನ ಕೊರವಿನಕೊಪ್ಪ ವಾರ್ಡ್ (ಅನುಸೂಚಿತ ಪಂಗಡ ಮಹಿಳೆ),

ಕಿತ್ತೂರು ತಾಲೂಕಿನ ಅವರಾದಿ ಗ್ರಾಪಂನ ಮಲ್ಲಾಪುರ ಕೆ. ಎ. ವಾರ್ಡ್(ಸಾಮಾನ್ಯ ಮಹಿಳೆ),

ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಪಂನ ಮಾಲದಿನ್ನಿ ವಾರ್ಡ್ (ಅನುಸೂಚಿತ ಜಾತಿ ಮಹಿಳೆ),

ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಪಂನ ಶಿಂಧೋಗಿ ವಾರ್ಡ್ (ಸಾಮಾನ್ಯ ಮಹಿಳೆ), ಹೂಲಿ ಗ್ರಾಪಂನ ಹೂಲಿ ವಾರ್ಡ್ (ಸಾಮಾನ್ಯ),

ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಪಂನ ಬಿಜಗುಪ್ಪಿ ವಾರ್ಡ್ (ಹಿಂದುಳಿದ ಬ ವರ್ಗ) ಚುಂಚನೂರ ಗ್ರಾಪಂನ ಉಜ್ಜಿನಕೊಪ್ಪ ವಾರ್ಡ್ (ಸಾಮಾನ್ಯ ಮಹಿಳೆ) ತಲಾ ೧ ಸ್ಥಾನಗಳಿಗೆ, ಸೇರಿದಂತೆ ಒಟ್ಟು ೨೧ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ ೧೦ ಕೊನೇಯ ದಿನವಾಗಿದೆ. ಮೇ ೧೧ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ ೧೩ ಕೊನೇಯ ದಿನವಾಗಿದೆ. ಮೇ ೨೦ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ.

ಮೇ ೨೨ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಯಶಸ್ವಿನಿ ಯೋಜನೆಯನ್ನು ಅಕ್ಟೋಬರ್ 2 ರಂದು ಉದ್ಘಾಟನೆ ಮಾಡಲು ಸೂಕ್ತ ಕ್ರಮ ವಹಿಸಲು ಸಿಎಂ.ಸೂಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button