ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಉಂಟಾಗುತ್ತಿದೆ. ಇದರಿಂದಾಗಿ ಶೇರು ಮತ್ತು ಬಂಗಾರದ ಬೆಲೆಯಲ್ಲಿ ತೀವ್ರ ಏರಿಳಿತ ಕಾಣುತ್ತಿದೆ. ಬೆಳಗ್ಗೆ ಒಂದು ದರವಿದ್ದರೆ ಮಧ್ಯಾಹ್ನದ ಹೊತ್ತಿಗೆ ಅದು ಬಹಳಷ್ಟು ವ್ಯತ್ಯಾಸ ಕಾಣುತ್ತಿದೆ.
ಸಧ್ಯ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿದೆ. ನಿನ್ನೆ ಸಂಜೆಯ ಹೊತ್ತಿಗೆ ಶೇರು ಮಾರುಕಟ್ಟೆಯಲ್ಲಿ ಉಂಟಾದ ಚೇತರಿಕೆ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲಾಗಿದೆ. ದೇಶಿಯ ಮಾರುಕಟ್ಟೆಗಳಲ್ಲಿ ಇಂದು ಚಿನ್ನದ ದರ ಕಡಿಮೆಯಾಗಿರುವುದು ಚಿನ್ನಾಭರಣ ಪ್ರಿಯರಿಗೆ ಸಂತಸ ಮೂಡಿಸಿದೆ.
ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ ಪರಿಣಾಮ ಚಿನ್ನದ ದರ 1660 ರೂಪಾಯಿಯಷ್ಟು ಇಳಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1274 ರೂಪಾಯಿ ಕಡಿಮೆಯಾಗಿ 50,913 ರೂ.ಗೆ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 2219 ರೂ. ಕಡಿಮೆಯಾಗಿ 64,809 ರೂ.ಗೆ ಮಾರಾಟವಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ದರ 1660 ರೂಪಾಯಿ ಕಡಿಮೆಯಾಗಿ 52,280 ರೂ.ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 1900 ರೂಪಾಯಿ ಕಡಿಮೆಯಾಗಿ 67,100 ರೂಪಾಯಿಗೆ ತಲುಪಿದೆ.
ಕೆಲವು ಜನರು ಇನ್ನೂ ಚಿನ್ನದ ಬೆಲೆ ಇಳಿಯಬಹುದು ಎಂದು ಕಾಯುತ್ತಿದ್ದರೆ, ಹಲವರು ಚಿನ್ನ ಕೊಳ್ಳಲು ಬಂಗಾರದ ಅಂಗಡಿಯತ್ತ ಹೋಗುತ್ತಿದ್ದಾರೆ.
ಉಕ್ರೇನ್ ನಿಂದ 480 ಭಾರತೀಯರ ಏರ್ ಲಿಫ್ಟ್ ಗೆ ಸಿದ್ಧತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ