Latest

ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ; ರಾಮಜನ್ಮ ಭೂಮಿಯಲ್ಲಿ ಬೆಳಗಿದ 5.51 ಲಕ್ಷ ದೀಪ

ಪ್ರಗತಿವಾಹಿನಿ ಸುದ್ದಿ; ಅಯೋಧ್ಯೆ: ದೀಪಾವಳಿ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ ಕಳೆಕಟ್ಟಿದ್ದು, 5.51 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಯಿತು. ಇಂದಿನಿಂದ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದ ಬಳಿಕ ನಡೆಯುತ್ತಿರುವ ಮೊದಲ ದೋಪೋತ್ಸವ ಇದಾಗಿದ್ದು, ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ವಿಜೃಂಭಣೆಯಿಂದ ದೀಪೋತ್ಸವ ಆಚರಿಸಿದೆ.

ಅಯೋಧ್ಯೆ ಸರಯೂ ನದಿಯ ದಡದಲ್ಲಿ ಈಬಾರಿ 5 ಲಕ್ಷದ 51 ಸಾವಿರ ದೀಪಗಳನ್ನು ಬೆಳಗಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿ ಬೆನ್ ಪಟೇಲ್ ಸೇರಿದಂತೆ ಗಣ್ಯಾತಿಗಣ್ಯರು ದೀಪೋತ್ಸವದಲ್ಲಿ ಭಾಗಿಯಾಗಿದ್ದರು. ಇನ್ನು ದೀಪೋತ್ಸವದ ಕಾರ್ಯಕ್ರಮದಲ್ಲಿ ತ್ರ‍ೇತಾಯುಗದ ಪರಿಕಲ್ಪನೆಯನ್ನು ಬಿಂಬಿಸಲಾಗಿದ್ದು, ರಾಮ, ಸೀತೆ ಹಾಗೂ ಲಕ್ಷಣ ವೇಷಧಾರಿಗಳು ಪುಷ್ಪಕ ವಿಮಾನ ಸಹಿತ ಆಗಮಿಸಿ, ಹೂವಿನ ಹಾಸಿಗೆಯ ಮೇಲೆ ನಡೆದು ಬಂದ ರೀತಿ ಅದ್ಭುತವಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button