ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದೆ. ಇದೇ ವೇಳೆ ಪಟಾಕಿ ಸದ್ದು-ಗದ್ದಲವೂ ಜೋರಾಗಿದೆ. ದೀಪಾವಳಿ ಹಬ್ಬ ಸಂಭ್ರಮಿಸಲು ಹೋಗಿ ಹಲವರು ಪಟಾಕಿ ಕಿಡಿ ತಗುಲಿ ಕಣ್ಣುಗಳಿಗೆ ಗಾಯ ಮಾಡಿಕೊಂದಿರುವ ಘಟನೆ ವರದಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಸಡಗರ-ಸಂಭ್ರಮದ ನಡುವೆ ಪಟಾಕಿಯಿಂದಾಗಿ ಒಂದೆಡೆ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಉಸಿರಾಡಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಪಟಾಕಿ ಕಿಡಿಗಳು ತಗುಲಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈವರೆಗೆ ಬೆಂಗಳೂರಿನ ಮಿಂಟೊ ಆಸ್ಪತ್ರೆಗೆ ಒಟ್ಟು 29 ಜನರು ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಟಾಕಿ ಕಿಡಿ ತಗುಲಿ ಕಣ್ಣುಗಳಿಗೆ ಗಾಯಗಳಾಗಿದ್ದು, ಈ ಪೈಕಿ 15 ಜನರಿಗೆ ಗಂಭೀರ ಗಾಯಗಳಾಗಿವೆ.
ದಾಖಲಾಗಿರುವ 29 ಜನರಲ್ಲಿ 9 ಜನ ವಸ್ಕರರಿದ್ದರೆ 9 ಜನರು ಮಕಕ್ಳು ಇದ್ದಾರೆ. ಈಗಗಲೇ ಇಬ್ಬರಿಗೆ ಸರ್ಜರಿ ಮಾಡಲಾಗಿದೆ ಎಂದು ವೈದರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ