Belagavi NewsBelgaum NewsLatest

*ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ*

ಪ್ರಗತಿವಾಹಿನಿ ಸುದ್ದಿ: ನರಕ ಚತುರ್ದಶಿ ಅ. 31, ಕರ್ನಾಟಕ ರಾಜ್ಯೋತ್ಸವ ನ. 01, ಬಲಿಪಾಡ್ಯಮಿ ಹಬ್ಬ ನ. 02 ಹಾಗೂ ರವಿವಾರ ನ. 03 ಸರಣಿ ರಜೆ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ಹುಕ್ಕೇರಿ, ರಾಯಭಾಗ ಮತ್ತು ಅಥಣಿ ಘಟಕಗಳಿಂದ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.

ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ಘಟಕಗಳಿಂದ ಅ. 29 ರಿಂದ ಅ. 30 ವರೆಗೆ ಬೆಂಗಳೂರಿನಿಂದ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ, ಅದೇ ರೀತಿಯಾಗಿ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಮತು ಗೋಕಾಕ ರಾಯಬಾಗ ಘಟಕಗಳಿಂದ ಕೊಲ್ಲಾಪುರ, ಪುಣೆ, ಮುಂಬಯಿ ಹಾಗೂ ಇತರೇ ಅಂತರರಾಜ್ಯ ಮಾರ್ಗಗಳಿಗೆ ಅ. 29 ರಿಂದ ನ. 12 ವರೆಗೆ ಕಾರ್ಯಾಚರಣೆ ಮಾಡಲಾಗಿದೆ.

ದೀಪಾವಳಿ ಹಬ್ಬ ಆಚರಿಸಿ ಮರುಳುವ ಪ್ರಯಾಣಿಕರಿಗಾಗಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ಹುಕ್ಕೇರಿ ರಾಯಬಾಗ ಮತ್ತು ಅಥಣಿ ಘಟಕಗಳಿಂದ ನವೆಂಬರ್. 03 ರಿಂದ 04 ವರೆಗೆ ಬೆಂಗಳೂರಿಗೆ ವಿಶೇಷ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.

ಬಲಿಪಾಡ್ಯಮಿ ಮತ್ತು ಬಾಹುದೂಜ ಇರುವುದರಿಂದ ನವೆಂಬರ್ 02 ರಿಂದ 03 ವರೆಗೆ ವಿಭಾಗದ ನಿಪ್ಪಾಣಿ ಘಟಕದಿಂದ ನಿಪ್ಪಾಣಿ-ಇಚಲಕರಂಜಿ, ನಿಪ್ಪಾಣಿ- ಕೋಲ್ಲಾಪುರ ಚಿಕ್ಕೋಡಿ ಘಟಕದಿಂದ ಚಿಕ್ಕೋಡಿ-ಇಚಲಕರಂಜಿ, ಚಿಕ್ಕೋಡಿ- ಮಿರಜ ಸಂಕೇಶ್ವರ ಘಟಕದಿಂದ ಸಂಕೇಶ್ವರ-ಗಡಹಿಂಗ್ಲಜ, ಸಂಕೇಶ್ವರ-ಕೋಲ್ದಾಪೂರ ಮತ್ತು ಅಥಣಿ ಘಟಕದಿಂದ ಅಥಣಿ-ಮಿರಜ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಚರಣೆ ಮಾಡಲಾಗಿದೆ ಎಂದು ಚಿಕ್ಕೋಡಿ ವಿಭಾಗ ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button