Film & EntertainmentKannada NewsKarnataka NewsLatest

*ಮಗಳ ಜೊತೆ ಬೆಂಗಳೂರಲ್ಲಿ ದೀಪಾವಳಿ ಆಚರಿಸಿದ ರಣವೀರ್-ದೀಪಿಕಾ*: *ಸಂಭ್ರಮದ ನಡುವೆ ಸ್ಟಾರ್‌ ಜೋಡಿ ಕುಟುಂಬಕ್ಕೆ ಆಘಾತ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ತಾರಾ ಜೋಡಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮುದ್ದಿನ ಮಗಳು ದೇವಿಯ ಮೊದಲ ದೀಪಾವಳಿಯನ್ನು ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಕುಟುಂಬದೊಂದಿಗೆ ಹಬ್ಬ ಆಚರಿಸಿದ ಅಪರೂಪದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ದೀಪಿಕಾ ಅವರ ಕುಟುಂಬದ ಮನೆಯಲ್ಲಿ ನಡೆದ ಈ ಸಂಭ್ರಮದಲ್ಲಿ ರಣ್‌ವೀರ್ ಮತ್ತು ದೀಪಿಕಾ ಜೊತೆಗೆ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ವಲಾ ಪಡುಕೋಣೆ ಹಾಗೂ ಸಹೋದರಿ ಅನಿಶಾ ಪಡುಕೋಣೆ ಭಾಗಿಯಾಗಿದ್ದರು. ಕೆಲ ಆಪ್ತ ಸ್ನೇಹಿತರೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಹಬ್ಬದ ವಿಶೇಷ ಉಡುಗೆಯಲ್ಲಿ ದಂಪತಿ ಕಂಗೊಳಿಸಿದ್ದಾರೆ. ರಣ್‌ವೀರ್ ನೇರಳೆ ಬಣ್ಣದ ಕುರ್ತಾ ಮತ್ತು ವೇಸ್ಟ್‌ಕೋಟ್ ಧರಿಸಿದ್ದರೆ, ದೀಪಿಕಾ ಹಳದಿ ಬಣ್ಣದ ಸಾಂಪ್ರದಾಯಿಕ ಸೂಟ್‌ನಲ್ಲಿ ಮಿಂಚಿದ್ದಾರೆ. ಮಗಳು ದೇವಿಯ ಮೊದಲ ದೀಪಾವಳಿ ಆಚರಣೆಯ ಈ ಕೌಟುಂಬಿಕ ಕ್ಷಣ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಆದರೆ ದೀಪಾವಳಿಯ ಸಂಭ್ರಮದ ನಡುವೆಯೇ ರಣ್‌ವೀರ್ ಕುಟುಂಬದಲ್ಲಿ ದುಃಖದ ಸುದ್ದಿಯೂ ಎದುರಾಗಿದೆ. ರಣ್‌ವೀರ್ ಅವರ ತಾಯಿಯ ಕಡೆಯ ಅಜ್ಜ ಡಾ. ರಾಮ್ ಹಿಂಗೊರಾಣಿ ಅವರು 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಅವರು ಕೊನೆಯುಸಿರೆಳೆದಿದ್ದು, ಕುಟುಂಬದವರಿಗೆ ಆಘಾತ ತಂದಿದೆ.

ರಣ್‌ವೀರ್ ಅವರ ಸಂಬಂಧಿ ಸೌಮ್ಯ ಹಿಂಗೊರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಜ್ಜನೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಅಜ್ಜಿಯ ಬಳಿಗೆ ನೆಮ್ಮದಿಯಿಂದ ತೆರಳಿದ್ದಾರೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. 96 ವರ್ಷಗಳ ಸುದೀರ್ಘ ಬದುಕು ಎಲ್ಲರಿಗೂ ಸ್ಫೂರ್ತಿ ಎಂದು ಸ್ಮರಿಸಿದ್ದಾರೆ. ಈ ಕುರಿತು ರಣ್‌ವೀರ್ ಸಿಂಗ್ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಣ್‌ವೀರ್ ಸಿಂಗ್ ತಮ್ಮ ಮುಂದಿನ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಧುರಂಧರ್’ ಫ್ರಾಂಚೈಸಿಯ ಯಶಸ್ಸಿನ ಬಳಿಕ, ಜೈ ಮೆಹ್ತಾ ನಿರ್ದೇಶನದ ‘ಪ್ರಳಯ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related Articles

Back to top button