
ಪ್ರಗತಿವಾಹಿನಿ ಸುದ್ದಿ : ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತಂಡ ಹಲವು ಕಡೆ ದಾಳಿ ನಡೆಸಿತು. ಬಳಿಕ ಅಲ್ ಫಲಾಹ್ ವಿವಿಯ ಸಂಸ್ಥಾಪಕ ಜಾವೇದ್ ಸಿದ್ದಿಕಿಯನ್ನು ಬಂಧಿಸಿದೆ.
ಜಾರಿ ನಿರ್ದೇಶನಾಲಯವು ಅಲ್ ಫಲಹ್ ವಿವಿಗೆ ಸೇರಿದ 25 ಕಡೆ ದಾಳಿ ನಡೆಸಿತ್ತು. ಈ ವೇಳೆ ವಿವಿಯ ಟ್ರಸ್ಟ್ ಗೆ ಸಂಬಂಧಿಸಿದಂತೆ ಕೋಟ್ಯಾಂತರ ರೂ. ಹಗರಣ ನಡೆಸಿರುವುದು ಬೆಳಕಿಗೆ ಬಂದಿತ್ತು. ಅಲ್ ಫಲಾಹ್ ಸಮೂಹ ಸಂಸ್ಥೆಯ ಅಧ್ಯಕ್ಷನಾಗಿರುವ ಈತ ವೈಟ್ ಕಾಲರ್ ಉಗ್ರರನ್ನು ಉತ್ಪಾದಿಸುತ್ತಿದ್ದ ಬಗ್ಗೆಯೂ ಸಾಕ್ಷ್ಯಾಧಾರಗಳು ದೊರೆತಿದ್ದು ತನಿಖೆ ಮುಂದುವರೆದಿದೆ. ಸಧ್ಯಕ್ಕೆ ಈತನನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಲಾಗಿದೆ.
19 ಸ್ಥಳಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದು ಬೆಳಗ್ಗೆ 5.15 ರಿಂದ ಪ್ರಾರಂಭಗೊಂಡ ದಾಳಿ ತಡರಾತ್ರಿಯವರೆಗೆ ಮುಂದುವರೆದಿತ್ತು.



