ಪ್ರಗತಿವಾಹಿನಿ ಸುದ್ದಿ: ದೆಹಲಿ ವಿಧಾನಸಭೆ ಚುನಾವಣೆ ಮತದಾನ ಅಂತ್ಯಗೊಂಡಿದೆ. ನಾಳೆ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಎಕ್ಸಿಟ್ ಪೋಲ್ ಅಬ್ಬರ ಶುರುವಾಗಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೇರಲಿದೆ ಎಂದಿದೆ. ಇತ್ತ ಅಧಿಕಾರದಲ್ಲಿರುವ ಆಮ್ ಆದ್ಮ ಪಕ್ಷ ಹಿನ್ನಡೆಯಾಗಲಿದೆ ಎಂದಿದೆ. ಈ ಮಧ್ಯೆ ದೆಹಲಿ ಚುನಾವಣೆಯಲ್ಲಿ ಯಾವ ಸಮುದಾಯವು ಯಾವ ಪಕ್ಷಕ್ಕೆ ಮತ ಹಾಕಿದೆ ಎಂಬ ಅಂಕಿ ಅಂಶಗಳ ಪಟ್ಟಿ ವೈರಲ್ ಆಗಿದೆ.
ಪ್ರದೀಪ್ ಗುಪ್ತಾ ಅವರ ಆಕ್ಸಿಸ್ ಮೈ ಇಂಡಿಯಾ ನಿರ್ಗಮನ ಸಮೀಕ್ಷೆಯ ಪ್ರಕಾರ, 53% ವಾಲ್ಮೀಕಿ ಮತಗಳು AAP ಗೆ ಹೋಗಿದ್ದರೆ, 35% ರಷ್ಟು BJP ಮತ್ತು ಅದರ ಮಿತ್ರಪಕ್ಷಗಳಿಗೆ ಹೋಗಿವೆ. AAP 60% ಜಾತವ್ ಮತಗಳು, 51% SC ಮತಗಳು, 74% ಮುಸ್ಲಿಂ ಮತಗಳು ಇತ್ಯಾದಿಗಳನ್ನು ಪಡೆಯುವ ನಿರೀಕ್ಷೆಯಿದೆ, ಆದರೆ BJP ಗೆ ಸಮುದಾಯಗಳ ಮತಗಳು ಕ್ರಮವಾಗಿ 28%, 39% ಮತ್ತು 5% ಎಂದು ಊಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ