ಪ್ರಗತಿವಾಹಿನಿ ಸುದ್ದಿ; ಮುಂಬೈ: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ರೂಪಾಂತರಿ ಅಟ್ಟಹಾಸ ಮೆರೆಯುತ್ತಿದ್ದು, ಮುಂಬೈನಲ್ಲೆ ಡೆಲ್ಟಾ ಪ್ಲಸ್ ಗೆ ಮೊದಲ ಸಾವು ಸಂಭವಿಸಿದೆ.
63 ವರ್ಷದ ಮಹಿಳೆ ಡೆಲ್ಟಾ ಪ್ಲಸ್ ಗೆ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅವರು 2 ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಆದಾಗ್ಯೂ ಡೆಲ್ಟಾ ವೈರಾಣುಗೆ ಬಲಿಯಾಗಿದ್ದಾರೆ.
ಈ ನಡುವೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ ಸಂಖ್ಯೆ 65ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ರತ್ನಗಿರಿಯಲ್ಲಿ ವೃದ್ಧೆಯೊಬ್ಬರು ಡೆಲ್ಟಾ ಪ್ಲಸ್ ಗೆ ಬಲಿಯಾಗಿದ್ದರು. ಡೆಲ್ಟಾ ಪ್ಲಸ್ ಸೋಂಕಿತರ ಪೈಕಿ ಹೊಸದಾಗಿ ಪತ್ತೆಯಾದ 20 ಜನರಲ್ಲಿ 7 ಜನ ಮುಂಬೈ, 3 ಜನ ಪುಣೆ, ನಾಂದೇಡ್, ಗೋಂದಿಯಾ, ರಾಯಘಡ, ಘಲ್ ಘರ್ ನಲಿ ಇಬ್ಬರು ಹಾಗೂ ಚಂದ್ರಾಪುರ, ಅಕೋಲಾದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ.
ಕಠಿಣ ನಿಯಮದ ಸುಳಿವು ನೀಡಿದ ಸಿಎಂ; ತಜ್ಞರ ತುರ್ತು ಸಭೆ ಕರೆದ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ