Belagavi NewsBelgaum NewsKannada NewsKarnataka NewsPolitics

*ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಬಿ.ಆರ್ ಗವಾಯಿಯವರು ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿವರಿಗೆ  ಮನವಿ ಸಲ್ಲಿಸಿದರು.

ನಗರದ ಡಾ. ಬ.ಆರ್ ಅಂಬೇಡ್ಕರ್ ಉದ್ಯಾನವನದಿಂದ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತೆರಳಿದ ಪ್ರತಿಭಟನಾಕಾರರು ವಕೀಲನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು ಮತ್ತು ಸರ್ವಜನ ಹಿತರಕ್ಷಣೆ ಪ್ರಮುಖವಾಗಿರುವ ಈ ದೇಶದಲ್ಲಿ ಇಂತಹ ಘಟನೆ ನಡೆದಿರುವುದು ಅವಮಾನವೀಯ ಹಾಗೂ ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯುಂಟು ಮಾಡುವ ಕೃತ್ಯ. ಹೀಗಾಗಿ ತಪ್ಪಿತಸ್ಥ ವಕೀಲನಿಗೆ ಕಠಿಣ ಶಿಕ್ಷ ವಿಧಿಸಬೇಕು. ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಶಶಿ ಸಿದ್ದಪ್ಪಾ ಕಾಂಬಳೆ, ಮಾಹೇತೆಶ ತಳವಾರ,ಶಶಿ ಸಾವಳ, ದೇಪಕ ದಬ್ಬಾಳೆ, ಸಾಗರ ಕಾಂಬಳೆ, ಆನಂದ ತಳವಾರ, ಲಕ್ಷ್ಮೀ ಮಾದರ, ಮಾಹದೇವಿ ಕಾಂಬಳೆ ಇತರರು ಇದ್ದರು.

Home add -Advt

Related Articles

Back to top button