Kannada NewsKarnataka NewsLatest

ಪಾಕಿಸ್ತಾನ ಪರ ಜಯಕಾರ ಹಾಕಿದವರ ಬಂಧನಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಮಹಾನಗರ ಪಾಲಿಕೆ ಸದಸ್ಯರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಹಾಜರಿದ್ದ ವಿಶ್ವಹಿಂದೂ ಪರಿಷತ್ ಮುಖಂಡ ಕೃಷ್ಣ ಭಟ್ ಮಾತನಾಡಿ, “ವಿಧಾನಸಭೆ ಚುನಾವಣೆ ಫಲಿತಾಂಶದ ದಿನವೇ ಶಿರಸಿ, ಭಟ್ಕಳ ಮೊದಲಾದೆಡೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ. ಇದು ಬೆಳಗಾವಿಯಲ್ಲೂ ನಡೆದಿದ್ದು ಘಟನೆ ನಡೆದು 15 ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ದೇಶಕ್ಕೆ ಅನೇಕ ಜನರ ತ್ಯಾಗದಿಂದ ಸ್ವಾತಂತ್ರ್ಯ ಬಂದಿದೆಯೇ ಹೊರತು ಯಾವುದೇ ವ್ಯಕ್ತಿ, ಪಕ್ಷದಿಂದಲ್ಲ. ಈ ಘಟನೆ ನೋವು ತಂದಿದ್ದು ಕೂಡಲೆ ಅಪರಾಧಿಗಳನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, “ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆದಷ್ಟೂ ಶೀಘ್ರ ಅಪರಾಧಿಗಳನ್ನು ಬಂಧಿಸಲಾಗುವುದು” ಎಂದು ಭರವಸೆ ನೀಡಿದರು.

ಪಾಲಿಕೆ ಮೇಯರ್ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಸವಿತಾ ಕಾಂಬಳೆ, ವೀಣಾ ಗಸ್ತಿ, ಪ್ರತಿಮಾ ಜೋಶಿ, ಸದಾಶಿವ ಹಿರೇಮಠ, ಆನಂದ ಕರಲಿಂಗಣ್ಣನವರ, ಡಾ. ನಾನಾಗೌಡ ಪಾಟೀಲ ಉಪಸ್ಥಿತರಿದ್ದರು.

Home add -Advt
https://pragati.taskdun.com/chief-minister-siddaramaiah-meeting-with-concerned-ministers-on-wednesday/
https://pragati.taskdun.com/no-de-notification-can-be-done-d-k-shivakumar/
https://pragati.taskdun.com/nitin-gadkar-gifted-a-saree-to-shashikala-jolla/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button