Kannada NewsKarnataka NewsLatest

ಖಾನಾಪುರ ತಾಲೂಕಿನಲ್ಲಿ ಬಸ್ ವ್ಯವಸ್ಥೆ ಸರಿಪಡಿಸಲು ಆಗ್ರಹ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ತಾಲೂಕಿಗೆ ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಒದಗಿಸಲು ಆಗ್ರಹಿಸಿ ಬಿಜೆಪಿ ನಾಯಕಿ ಸೋನಾಲಿ ಸರ್ನೋಬತ್ ಅವರು ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜನರು ಬೆಳಗಾವಿ ತಾಲೂಕು ಹಾಗೂ ನಗರಕ್ಕೆ ಬರಲು ರಾಜ್ಯ ಸಾರಿಗೆ ಬಸ್ಸುಗಳನ್ನೇ ಅವಲಂಬಿಸುತ್ತಾರೆ.
ಖಾನಾಪುರ ತಾಲೂಕಿನ ಜನತೆ ಶಾಲಾ- ಕಾಲೇಜು ಹಾಗೂ ಉದ್ಯೋಗಕ್ಕೆ ಬೆಳಗಾವಿಗೆ ಬರಬೇಕಾಗಿರುವುದರಿಂದ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
ಹಳಿಯಾಳ ಕಡೆಯಿಂದ ಬರುವ ಬಸ್ಸುಗಳು ತಾಲೂಕಿನ ಪ್ರಧಾನ ಸ್ಟಾಪ್ ಗಳಲ್ಲಿ ನಿಲ್ಲಿಸಲು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಇಲ್ಲಿ ನಿಲ್ಲಿಸುತ್ತಿಲ್ಲ. ಈ ಬಗ್ಗೆ ಈಗಾಗಲೇ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಕಕ್ಕೇರಿ, ಚುಂಚವಾಡ, ಕರಿಕಟ್ಟಿ, ರಾಮಾಪುರ, ಸುರಪುರ, ಲಿಂಗನಮಠ, ಸುರಪುರ ಕೆರವಾಡ, ಘಸ್ಟೊಳ್ಳಿ ದಡ್ಡಿ, ಬೂರಣಕಿ, ಮಾಸ್ಕೇನಟ್ಟಿ, ಗೋದಳ್ಳಿ, ಗುಂಡಳ್ಳಿ, ಅವರೊಳ್ಳಿ, ಪಾರವಡ, ನಂದಗಡ, ಹಾಗೂ ತಾವರಗಟ್ಟಿ ಮತ್ತಿತರ ಗ್ರಾಮಗಳ ಹಾಗೂ ಹೊಲ ಗದ್ದೆಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ, ಶಾಲಾ ಕಾಲೇಜುಗಳಿಗೆ ವ್ಯಾಪಾರಸ್ಥರಿಗೆ ಬೆಳಗಾವಿ ಮಾರುಕಟ್ಟೆಗೆ, ರೋಗಿಗಳಿಗೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ ಸಾರಿಗೆ ಬಸ್ಸುಗಳನ್ನು ಒದಗಿಸುವುದು ಜತೆಗೆ ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಈ ಮುಖ್ಯ ಬಸ್ ಸ್ಟಾಪ್ ಗಳಲ್ಲಿ ನಿಲುಗಡೆ ನೀಡಬೇಕೆಂದು ಅವರು ಕೋರಿದ್ದಾರೆ.

ಈಗ ಬಸ್ ಸ್ಟಾಪ್ ಇಲ್ಲದೆ ಇರುವುದರಿಂದ ನಿಲ್ಲಿಸಿದ ಬಸ್ ನಲ್ಲಿ ಕಿಕ್ಕಿರಿದು ಜನ ತುಂಬಿ ಬಸ್ಸಿನ ಒಳಗೆ ಉಸಿರುಕಟ್ಟುವಂತಹ ಪರಿಸ್ಥಿತಿ ಇದೆ. ಜತೆಗೆ ವಿದ್ಯಾರ್ಥಿಗಳು ಬಸ್ ಫುಟ್ ಬೋರ್ಡಿನ ಮೇಲೆ ಪ್ರಯಾಣ ಮಾಡುವಂತಾಗಿದೆ.

Home add -Advt

ಈ ಹಿಂದೆ ಸಂಚಾರ ಮಾಡುತ್ತಿದ್ದ ಕೆಲ ಬಸ್ ಸಂಚಾರವನ್ನು ಕೊರೊನಾ ಅವಧಿಯಿಂದ ಕೈ ಬಿಡಲಾಗಿದೆ. ಇಂದಿಗೂ ಮರು ಸಂಚಾರ ಶುರುವಾಗಿಲ್ಲ ಹಾಗಾಗಿ ಈ ಭಾಗದ ಜನತೆ ಸಾರಿಗೆಗಾಗಿ ಪರದಾಡುವಂತಾಗಿದೆ.  ಈ ಭಾಗದ ಜನತೆಯ ಸಂಕಟ ಅರಿತು ಅವರ ಈ ತೊಂದರೆಗೆ ಪರಿಹಾರ ಕಲ್ಪಿಸುವುದರ ಜತೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಡಾ. ಸೋನಾಲಿ ಸರ್ನೋಬತ್ ಮನವಿ ಮಾಡಿಕೊಂಡಿದ್ದಾರೆ.

ಮನವಿ ಸ್ವೀಕರಿಸಿದ ಸಚಿವ ಬಿ. ಶ್ರೀರಾಮುಲು ಈ ಕುರಿತು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಬಳ್ಳಾರಿ ಶಾಸಕ ಸೋಮಶೇಖರ ಉಪಸ್ಥಿತರಿದ್ದರು.

ತಾಯಿಗಾಗಿ ತುನೀಶಾ ಬಿಟ್ಟುಹೋದ ಆಸ್ತಿ ಎಷ್ಟು ಗೊತ್ತೇ?

https://pragati.taskdun.com/do-you-know-how-much-property-tunisha-left-for-her-mother/

ಲೈಂಗಿಕ ಕಿರುಕುಳ ಪ್ರಕರಣ; ಟಿವಿಎಫ್ ಸಂಸ್ಥಾಪಕ ಅರುಣಾಭ್ ಕುಮಾರ್ ದೋಷಮುಕ್ತ

https://pragati.taskdun.com/a-case-of-sexual-harassment-tvf-founder-arunabh-kumar-acquitted/

*ಗಡಿ ವಿವಾದ: ಸಿಎಂಗೆ ಡಿ.ಕೆ ಶಿವಕುಮಾರ್‌ ಸವಾಲು*

https://pragati.taskdun.com/d-k-shivakumarcm-basavaraj-bommaikarnataka-maharashtra-border-issue/

Related Articles

Back to top button