
ಚಿಕನ್ ಗುನ್ಯಾ, ಡೆಂಗ್ಯೂ ಲಸಿಕೆ ಕಾರ್ಯಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಮತ್ತು ವಿಮಲ್ ಫೌಂಡೇಶನ್ ಅಧ್ಯಕ್ಷ ಕಿರಣ ಜಾಧವ ನೇತೃತ್ವದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಚಿಕನ್ ಗುನ್ಯಾ ಮತ್ತು ಡೆಂಗ್ಯು ನಿರೋಧಕ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಟಿಳಕಚೌಕ್ ಸೇರಿದಂತೆ ವಿವಿಧೆಡೆ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಲಸಿಕೆಗಳನ್ನು ಹಾಕಲಾಯಿತು. ಗಣೇಶ ನಂದಗಡಕರ್, ಸಂತೋಷ ಪೆಡ್ನೇಕರ್, ಪ್ರಿಯಾಂಕಾ ಕಲ್ಘಟಕರ್, ಪ್ರಜ್ಞಾ ಶಿಂಧೆ, ಅಮೃತಾ ಕಾರೇಕರ್, ಸುನೀತಾ ಇಟಗಿ, ರಾಜನ್ ಜಾಧವ ಸೇರಿದಂತೆ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ