
ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಯಚೂರಿನಲ್ಲಿ ಡೆಂಘಿ ಅಟ್ಟಹಾಸಕ್ಕೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಮಾನ್ವಿ ತಾಲೂಕಿನಲ್ಲಿ ಕಳೆದ 20 ದಿನಗಳ್ಲಲಿ 200 ಜನರಲ್ಲಿ ಡೆಂಘಿ ಕೇಸ್ ಪತ್ತೆಯಾಗಿದೆ.
ಕಳೆದ ಒಂದುವರೆ ತಿಂಗಳಲ್ಲಿ ಡೆಂಘಿಯಿಂದಾಗಿ ಜಿಲ್ಲೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಒಂದೇ ವಾರದಲ್ಲಿ ಇಬ್ಬರು ಮಕ್ಕಳು ಡೆಂಘಿಗೆ ಬಲಿಯಾಗಿದ್ದಾರೆ.
ಮಾನ್ವಿ ಸೇರಿದಂತೆ ಜಿಲ್ಲೆಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೂಡ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ರಾಯಚೂರು ನಗರ ಹಾಗೂ ಹೈದರಾಬಾದ್ ಗಳಿಗೆ ತೆರಳಿ ಜನರು ಚಿಕಿತ್ಸೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಜಿಲ್ಲೆಯ ಜನರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ.
ಹವಾಮಾನ ವೈಫರೀತ್ಯದ ಬೆನ್ನಲ್ಲೇ ಜಿಲ್ಲೆಯಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು, ಬಡಾವಣೆಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕೂಡ ಪ್ರಕರಣ ಹೆಚ್ಚಲು ಕಾರಣವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಇಂದಿನಿಂದ 1-5ನೇ ತರಗತಿ ಅರ್ಧ ದಿನ ಶಾಲೆ