Latest

ಇಂದಿನಿಂದ 1-5ನೇ ತರಗತಿ ಅರ್ಧ ದಿನ ಶಾಲೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದ ಶಾಲೆಗಳತ್ತ ಧಾವಿಸಿ ಬರುತ್ತಿದ್ದಾರೆ.

ಇಂದಿನಿಂದ 1-5ನೇ ತರಗತಿಯ ಶಾಲೆಗಳು ಆರಂಭವಾಗಿದ್ದು, 20 ತಿಂಗಳ ಬಳಿಕ ಮನೆ ಪಾಠಕ್ಕೆ ಬ್ರೇಕ್ ಬಿದ್ದಿದ್ದು, ತರಗತಿಗಳು ಆರಂಭವಾಗಿವೆ. ಮಕ್ಕಳನ್ನು ಸ್ವಾಗತಿಸಲು ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಶಾಲೆಗಳನ್ನು ಶೃಂಗರಿಸಲಾಗಿದೆ.

Home add -Advt

ಅ.30ವರೆಗೆ ಅರ್ಧ ದಿನ ಮಾತ್ರ ತರಗತಿಗಳು ಇರಲಿವೆ. ನ.2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭವಾಗಲಿದೆ. ಅ.30ವರೆಗೆ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಇರಲ್ಲ.

ಮಾರ್ಗಸೂಚಿ:

ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಕಡ್ಡಾಯವಾಗಿದೆ.
ಶಿಕ್ಷಕರಿಗೆ 2 ಡೋಸ್ ಲಸಿಕೆ ಕಡ್ಡಾಯ
ಶೇ.50ರಷ್ಟು ಮಾತ್ರ ತರಗತಿಗಳಲ್ಲಿವಿದ್ಯಾರ್ಥಿಗಳಿಗೆ ಅವಕಾಶ
ಶಾಲೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ.
ಅಗತ್ಯ ಕುಡಿಯುವ ಬಿಸಿನೀರಿನ ವ್ಯವಸ್ಥೆ
ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ತರಗತಿಗಳಿಗೂ ಅವಕಾಶ
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ತರಗತಿಗಳು
ನವೆಂಬರ್ 2ರಿಂದ ಬೆಳಿಗ್ಗೆ 8ರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ಆರಂಭ
ಎಲ್ ಕೆಜಿ, ಯುಕೆಜಿ ತರಗತಿಗಳಿಗೆ ಸದ್ಯಕ್ಕೆ ಅವಕಾಶವಿಲ್ಲ

Related Articles

Back to top button