
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗ್ರಾಮ ಪಂಚಾಯತಿ, ಹೋಬಳಿ, ತಾಲೂಕು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಕೈಗೊಂಡು ಸ್ವಚ್ಚ ಭಾರತ ಅಭಿಯಾನ ಸಾಕಾರಗೊಳಿಸಬೇಕಿದೆ. ಈ ಹಂತದಲ್ಲಿ ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ಸಿವಿಕ್ಸ್ ಬೈಲಾಸ್‌ಗಳನ್ನು ಪಾಲಿಸಬೇಕಿದೆ. ಕಲ್ಲಿನ ಗಣಿಗಾರಿಕೆ ನಡೆಯುವ ಕ್ವಾರಿ ಪ್ರದೇಶದಲ್ಲಿ ಜನ ವಸತಿ ಇರದ ಹಾಗೆ ಕ್ರಮವಹಿಸಬೇಕಿದೆ. ನಿಷ್ಕಿçಯ ಕ್ವಾರಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಅಂಗನವಾಡಿ ಕೇಂದ್ರದ ಮಕ್ಕಳಲ್ಲಿ ಜ್ವರ ಕಂಡುಬಂದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸಬೇಕಿದೆ. ಈ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಗೃಹದಲ್ಲಿ ಗುರುವಾರ(ಮೇ.೧೨) ನಡೆದ ವಿಶ್ವ ಡೆಂಗೀ ದಿನಾಚರಣೆ ಕುರಿತು. ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರಾವರಿ ಯೋಜನೆಗಳಡಿಯಲ್ಲಿ ಕೆಲಸಕ್ಕಾಗಿ ಬರುವ ಕಾರ್ಮಿಕರ ಚಲನವಲನದ ಬಗ್ಗೆ ಮುಂಚಿತವಾಗಿ ಆರೋಗ್ಯ ಇಲಾಖೆಗೆ ತಿಳಿಸಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಯಂತ್ರಣದಲ್ಲಿಡುವುದಕ್ಕೆ ಕೆನಲ್‌ಗಳನ್ನು ಸೂಕ್ತ ತಾಂತ್ರಿಕ ವಿಧಾನಗಳನ್ನು ಅನುಸರಿಸುವದರ ಮೂಲಕ ಸ್ವಚ್ಛಗೊಳಿಸಬೇಕು ಜೊತೆಗೆ ಎಲ್ಲ ಇಲಾಖೆಗಳ ಸಹಭಾಗಿತ್ವದಲ್ಲಿ ಡೆಂಗೀ ನಿಯಂತ್ರಣಕ್ಕಾಗಿ ಕೈ ಜೋಡಿಸಬೇಕೆಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಮ್.ಎಸ್.ಪಲ್ಲೇದ ಮಾತನಾಡಿ ಜಿಲ್ಲೆಯಲ್ಲಿ ಇಲ್ಲಿವರೆಗೆ ಪ್ರಸ್ತುತ 21 ಡೆಂಗಿ ಪ್ರಕರಣಗಳು ಕಂಡು ಬಂದಿವೆ ಹಾಗೂ 292 ಡೆಂಗೀ ರಕ್ತ ಮಾದರಿ ತಪಾಸಣೆ ಮಾಡಲಾಗಿದೆ. ಈಗ ಮಳೆಗಾಲ ಆರಂಭವಾಗುವ ಮುಂಚೆ 2302 ಭಾವಿ, ಕೆರೆಗಳಲ್ಲಿ ಲಾರ್ವಾ ಹಾರಿ ಗಪ್ಪಿ, ಗ್ಯಂಬೂಸಿಯಾ ಮೀನುಗಳನ್ನು ಬಿಡಲಾಗಿದೆ ಎಂದು ಹೇಳಿದ ಅವರು ಮೂಲಕ ವಿವಿಧ ಇಲಾಖೆಗಳ ಜವಾಬ್ದಾರಿ ಹಾಗೂ ಡೆಂಗೀ ನಿಯಂತ್ರಣಕ್ಕೆ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿಕೊಟ್ಟರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಹೆಚ್.ವ್ಹಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ. ಎಸ್.ವ್ಹಿ.ಮುನ್ಯಾಳ, ಇನ್ನಿತರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
ರೈತರ ಸ್ವಾವಲಂಬಿ ಬದುಕಿಗೆ ಕೆಎಂಎಫ್ ವರದಾನ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ




