Latest

ವೋಟರ್ ಸ್ಲಿಪ್ ತರದ ರಾಜಮಾತೆಗೆ ಮತದಾನ ನಿರಾಕರಣೆ; ಕೊನೆಗೆ ಮಾಡಿದ್ದೇನು?

ಪ್ರಗತಿವಾಹಿನಿ ಸುದ್ದಿ, ಮೈಸೂರು: ವೋಟರ್ ಸ್ಲಿಪ್ ತರಲಿಲ್ಲ ಎಂಬ ಕಾರಣಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಕೃಷ್ಣರಾಜಸಾಗರ ಮತಗಟ್ಟೆ ಅಧಿಕಾರಿಗಳು ಮತ ಚಲಾವಣೆಗೆ ಅವಕಾಶ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

ಮತದಾನ ಮಾಡಲು ವೋಟರ್ ಐಡಿ ಜತೆ ವೋಟರ್ ಸ್ಲಿಪ್ ಕೂಡ ತರಬೇಕು. ಈ ಮೊದಲು ಅವುಗಳನ್ನು ರಾಜಕೀಯ ಪಕ್ಷದವರೇ ನೀಡುತ್ತಿದ್ದರು. ಆದರೆ ಈ ಬಾರಿ ಕಚೇರಿಯಿಂದ ನೀಡಲಾಗಿದೆ. ಪ್ರಮೋದಾ ದೇವಿ ಅವರು ವೋಟರ್ ಸ್ಲಿಪ್ ಮನೆಯಲ್ಲೇ ಬಿಟ್ಟು ಕೇವಲ ವೋಟರ್ ಕಾರ್ಡ್ ನೊಂದಿಗೆ ಬಂದಿದ್ದರು. ಕಾನೂನು ಎಲ್ಲರಿಗೂ ಒಂದೇ ರೀತಿ ಇರುವುದರಿಂದ ಕೇವಲ ವೋಟರ್ ಐಡಿ ಮೇಲೆ ಮತದಾನ ಮಾಡಲು ಬರುವುದಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡಲು ನಿರಾಕರಿಸಿದರು.

ಈ ವೇಳೆ ಪ್ರಮೋದಾದೇವಿ ಅವರು ಸಾಫ್ಟ್ ಕಾಪಿ ತೋರಿಸಿದರಾದರೂ ಅದನ್ನಾಧರಿಸಿ ಅನುಮತಿ ನೀಡಲಾಗದು ಎಂದು ಅಧಿಕಾರಿಗಳು ಹೇಳಿದರು. ಮತಗಟ್ಟೆಯಿಂದ ಹೊರಬಂದ ಪ್ರಮೋದಾ ದೇವಿ ಅವರು ಕಾರಿನಲ್ಲೇ ಕುಳಿತು ತಮ್ಮ ಆಪ್ತರಿಂದ ವೋಟರ್ ಸ್ಲಿಪ್ ನ ಪ್ರಿಂಟೆಡ್ ಕಾಪಿ ತರಿಸಿ ಮತದಾನ ಮಾಡಿದರು.

ನಂತರ ಹೊರ ಬಂದ ಪ್ರಮೋದಾ ದೇವಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ “ವೋಟರ್ ಸ್ಲಿಪ್ ತರುವುದು ಕಡ್ಡಾಯ ಎಂದು ಗೊತ್ತಿರಲಿಲ್ಲ. ನಿಯಮ ಹಾಗಿದ್ದಾಗ ನಿರಾಕರಿಸಿದರೆ ಏನೂ ಮಾಡಲು ಬರುವುದಿಲ್ಲ. ನಮ್ಮ ಭಾವನೆಗಳೇನಿದ್ದರೂ ಆಮೇಲಿಂದ ವ್ಯಕ್ತಪಡಿಸಬಹುದು. ಮತದಾನವನ್ನಂತೂ ಮಾಡಲೇಬೇಕು. ಹೀಗಾಗಿ ಮತ ಚಲಾಯಿಸಿದ್ದೇನೆ” ಎಂದರು.

Home add -Advt

https://pragati.taskdun.com/karnataka-vidhanasabha-electioncm-basavaraj-bommaivoting/
https://pragati.taskdun.com/mysoresiddaramaiahsiddaramanahundivoting/
https://pragati.taskdun.com/karnataka-vidhanasabha-electionvotingstartlakshman-savadi-voting/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button