Kannada NewsKarnataka NewsLatest

ಹುದಲಿಯಲ್ಲಿ ಸಂಜೆ 4 ಗಂಟೆಗೆ ದೇಸಾಯಿ ಅಂತ್ಯಕ್ರಿಯೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  :  ಇಂದು ಬೆಳಗ್ಗೆ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಹಿರಿಯ ಪತ್ರಕರ್ತರೂ ಆದ ಎಂ. ಬಿ. ದೇಸಾಯಿ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಹುದಲಿಯಲ್ಲಿ ನಡೆಯಲಿದೆ.
      ಹದಿನಾರನೇ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದ ದೇಸಾಯಿಯವರು ೧೯೫೬ ರಲ್ಲಿ ದರ್ಶನ ಎಂಬ ವಾರಪತ್ರಿಕೆಯನ್ನು ಆರಂಭಿಸಿ ಆರು ವರ್ಷಗಳ ನಂತರ ೧೯೬೩ ರಲ್ಲಿ ಅದನ್ನೇ ಲೋಕದರ್ಶನ ದೈನಿಕವಾಗಿ ಪರಿವರ್ತಿಸಿ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸಂಪಾದಕತ್ವದ ಕಾರ್ಯ ನಿರ್ವಹಿಸಿದವರು.
      ಮೂಲತಃ ಹುದಲಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಮೋಹನ ಬಸವಂತಪ್ಪ ದೇಸಾಯಿಯವರ ಹಿರಿಯ ಸಹೋದರರು ಸಹ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಮಹಾತ್ಮಾ ಗಾಂಧೀಜಿಯವರ ಒಡನಾಟ ಹೊಂದಿದ್ದರು.
       ಗಡಿಭಾಗವಾದ ಬೆಳಗಾವಿಯಲ್ಲಿ ಅರವತ್ತು ವರ್ಷಗಳ ಹಿಂದೆಯೇ ಕನ್ನಡಿಗರ ಗಡಿಭಾಷಾ ಹೋರಾಟಕ್ಕೆ ಧ್ವನಿಯಾಗುವಂತೆ  ಪತ್ರಿಕೆಯನ್ನು ನಡೆಸಿದ ದೇಸಾಯಿಯವರು ಭಾಷಾಂಧರಿಂದ ಸಾಕಷ್ಟು ಹಾನಿ ಅನುಭವಿಸಿದರೂ ಪತ್ರಿಕೆಯನ್ನು ಬಹಳ ಕಷ್ಟ ಪಟ್ಟು ನಡೆಸಿಕೊಂಡು ಬಂದ ಕನ್ನಡಾಭಿಮಾನಿಗಳಾಗಿದ್ದರು.
       ಮೃತರು ಪತ್ನಿ, ಇಬ್ಬರು ಗಂಡುಮಕ್ಕಳು ಮತ್ತು ಓರ್ವ ಪುತ್ರಿ , ಮೊಮ್ಮಕ್ಕಳು ಅಪಾರ ಬಂಧು ಬಳಗಇದೆ.
ಇದನ್ನೂ ಓದಿ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button