Belagavi NewsBelgaum NewsBusinessKannada NewsKarnataka NewsLatest

*ದೇಶಪಾಂಡೆ ಇಂಡಸ್ಟ್ರೀಸ್‌ಗೆ 50ರ ಸಂಭ್ರಮ; ನೂತನ ಕಚೇರಿ–ಕಾರ್ಖಾನೆ ಶುಭಾರಂಭ* *ಹೊಸ ಆವರಣದಿಂದ ಮತ್ತಷ್ಟು ಸೇವೆ ವಿಸ್ತರಣೆಗೆ ಸಜ್ಜು: ಅಭಯ ಪಾಟೀಲ*

ದೇಶಪಾಂಡೆ ಇಂಡಸ್ಟ್ರೀಸ್‌ಗೆ 50ರ ಸಂಭ್ರಮ; ನೂತನ ಕಚೇರಿ–ಕಾರ್ಖಾನೆ ಶುಭಾರಂಭ

ಹೊಸ ಆವರಣದಿಂದ ಮತ್ತಷ್ಟು ಸೇವೆ ವಿಸ್ತರಣೆಗೆ ಸಜ್ಜು: ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡೀಸೆಲ್ ಜನರೇಟರ್ ಸೆಟ್‌ಗಳ ಮಾರಾಟ, ಸರ್ವಿಸಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಐದು ದಶಕಗಳ ಸೇವೆ ಸಲ್ಲಿಸಿರುವ ದೇಶಪಾಂಡೆ ಇಂಡಸ್ಟ್ರೀಸ್ ಸಂಸ್ಥೆಯ 50ನೇ ವರ್ಷಾಚರಣೆ ಅಂಗವಾಗಿ ಉದ್ಯಮಬಾಗದ ಬಿಇಎಂಸಿಐಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಕಚೇರಿ ಹಾಗೂ ಕಾರ್ಖಾನೆ ಶುಕ್ರವಾರ ಶುಭಾರಂಭಗೊಂಡಿತು.

ಶಾಸಕ ಅಭಯ ಪಾಟೀಲ ಹಾಗೂ ಪ್ರೀತಿ ಪಾಟೀಲ ಅವರು ಸಂಸ್ಥೆಯ ನೂತನ ಆವರಣವನ್ನು ಉದ್ಘಾಟಿಸಿದರು. ಐದು ದಶಕಗಳ ಹಿಂದೆ ಆರಂಭಗೊಂಡ ಸಂಸ್ಥೆ ತನ್ನ ಸೇವೆ, ಗುಣಮಟ್ಟ ಹಾಗೂ ಗ್ರಾಹಕರ ವಿಶ್ವಾಸದ ಮೂಲಕ ಬೆಳಗಾವಿ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ತನ್ನದೇ ಆದ ಸ್ಥಾನಮಾನ ಗಳಿಸಿರುವ ಹಿನ್ನೆಲೆಯಲ್ಲಿ ನೂತನ ಆವರಣದ ಆರಂಭ ಮತ್ತೊಂದು ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿತು.

Home add -Advt

ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಶ್ರೀಕಾಂತ ದೇಸಾಯಿ, ಗ್ರೀವ್ಸ್ ಕಾಟನ್ ಲಿಮಿಟೆಡ್‌ನ ಸೇಲ್ಸ್ ಆ್ಯಂಡ್ ಸರ್ವಿಸ್ ವಿಭಾಗದ ಜನರಲ್ ಮ್ಯಾನೇಜರ್ ವಿಜಯ ಛಟ್ಟಾಣಿ, ಸರ್ವಿಸ್ ಆ್ಯಂಡ್ ಐಬಿ ವಿಭಾಗದ ಎಜಿಎಂ ನರಸಿಂಹರಾವ ಕುಲಕರ್ಣಿಭರತ ಪಾಟೀಲ, ಭರತ ದೇಶಪಾಂಡೆ, ಮೇಧಾ ದೇಶಪಾಂಡೆ, ಶ್ರಿಯಾ ದೇಶಪಾಂಡೆ, ಯೋಗೇಶ ಮುರಕಿಬಾವಿ, ಸಾನ್ವಿಕಾ ಸೇರಿದಂತೆ ಗಣ್ಯರು, ಉದ್ಯಮಿಗಳು, ಸಂಸ್ಥೆಯ ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಹೊಸ ಆವರಣದಿಂದ ಸೇವೆ ಮತ್ತಷ್ಟು ವಿಸ್ತರಿಸಲಿ: ಅಭಯ ಪಾಟೀಲ

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ, ಹೊಸ ವಾಸ್ತುವಿನಲ್ಲಿ ದೇಶಪಾಂಡೆ ಇಂಡಸ್ಟ್ರೀಸ್ ಇಂದು ಹೊಸ ಹೆಜ್ಜೆ ಇಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

“ದೇಶಪಾಂಡೆ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕರು ನನಗೆ ಆತ್ಮೀಯ ಮಿತ್ರರು. ಕಳೆದ ಹಲವು ವರ್ಷಗಳಿಂದ ಸಂಸ್ಥೆ ತನ್ನ ಸೇವೆಯ ಮೂಲಕ ಜನಮನ್ನಣೆ ಗಳಿಸಿದೆ. ಇದೀಗ ಹೊಸ ಆವರಣಕ್ಕೆ ಸ್ಥಳಾಂತರಗೊಂಡಿರುವ ಸಂಸ್ಥೆ ಇನ್ನಷ್ಟು ಉನ್ನತಿಗೆ ಏರಲಿ. ಬೆಳಗಾವಿ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಜನತೆಗೂ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ” ಎಂದು ಶುಭ ಹಾರೈಸಿದರು.

ಐದು ದಶಕಗಳ ಕಾಲ ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವುದು ಸುಲಭದ ಕೆಲಸವಲ್ಲ. ನಿರಂತರ ಗುಣಮಟ್ಟದ ಸೇವೆ, ಗ್ರಾಹಕರ ವಿಶ್ವಾಸ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದಿಂದಲೇ ಸಂಸ್ಥೆ ಇಷ್ಟು ವರ್ಷಗಳ ಕಾಲ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ಜಾಗದಿಂದ ಹೊಸ ಗೆಲುವು ಸಿಗಲಿ: ಶ್ರೀಕಾಂತ ದೇಸಾಯಿ

ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಶ್ರೀಕಾಂತ ದೇಸಾಯಿ ಮಾತನಾಡಿ, ದೇಶಪಾಂಡೆ ಇಂಡಸ್ಟ್ರೀಸ್ ಕಳೆದ 50 ವರ್ಷಗಳಿಂದ ಉತ್ತಮ ಕಾರ್ಯ ಮಾಡುತ್ತಾ ಬಂದಿದೆ. ಇದೀಗ ಶ್ರಿಯಾ ದೇಶಪಾಂಡೆ ಅವರ ಮುಂದಾಳತ್ವದಲ್ಲಿ ಸಂಸ್ಥೆ ಮತ್ತಷ್ಟು ಉನ್ನತಿಯತ್ತ ಸಾಗುತ್ತಿರುವುದು ಸಂತಸದ ವಿಷಯ ಎಂದರು.

“ಹೊಸ ಜಾಗದಿಂದ ಸಂಸ್ಥೆಗೆ ಹೊಸ ಗೆಲುವು ಸಿಗಲಿ. ದೊಡ್ಡ ಕಂಪನಿಗಳ ಜನರೇಟರ್‌ಗಳ ಮಾರಾಟ, ಸರ್ವಿಸಿಂಗ್ ಹಾಗೂ ಮಾರ್ಕೆಟಿಂಗ್ ಕಾರ್ಯವನ್ನು ದೇಶಪಾಂಡೆ ಇಂಡಸ್ಟ್ರೀಸ್ ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಿದೆ. ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ನೀಡುವ ಈ ಕಾರ್ಯ ಇದೇ ರೀತಿ ಮುಂದುವರಿಯಲಿ” ಎಂದು ಅವರು ಹಾರೈಸಿದರು.

ದೇಶಪಾಂಡೆ ಇಂಡಸ್ಟ್ರೀಸ್ ಐದು ದಶಕಗಳ ಪಯಣದಲ್ಲಿ ಗಳಿಸಿರುವ ಅನುಭವವನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ಕೊಂಡೊಯ್ಯುವ ಮೂಲಕ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಶುಭ ಕೋರಿದರು.

ಗ್ರಾಹಕರ ವಿಶ್ವಾಸವೇ ನಮ್ಮ ಬೆಳವಣಿಗೆಯ ಶಕ್ತಿ: ಶ್ರಿಯಾ ದೇಶಪಾಂಡೆ

ಸಂಸ್ಥೆಯ ಶ್ರಿಯಾ ದೇಶಪಾಂಡೆ ಮಾತನಾಡಿ, ತಮ್ಮ ಅಜ್ಜಂದಿರು ಸ್ಥಾಪಿಸಿದ ಸಂಸ್ಥೆ ಇಂದು ಹಂತ ಹಂತವಾಗಿ ಬೆಳವಣಿಗೆಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

“ನಮ್ಮ ಅಜ್ಜಂದಿರು ಸ್ಥಾಪಿಸಿದ್ದ ಈ ಸಂಸ್ಥೆ ಇಂದು ಸಾಕಷ್ಟು ಬೆಳವಣಿಗೆಯಾಗುತ್ತಾ ಮುನ್ನಡೆಯುತ್ತಿದೆ. ಈ ಬೆಳವಣಿಗೆಗೆ ನಮ್ಮ ಗ್ರಾಹಕರು ಇಟ್ಟಿರುವ ವಿಶ್ವಾಸವೇ ಪ್ರಮುಖ ಕಾರಣ. ಐದು ದಶಕಗಳ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಇದೀಗ ಹೊಸ ಕಚೇರಿ ಮತ್ತು ಕಾರ್ಖಾನೆಯನ್ನು ಆರಂಭಿಸುತ್ತಿರುವುದು ನಮಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ” ಎಂದರು.

ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನ ಹಾಗೂ ವಿಶ್ವಾಸಾರ್ಹ ಸೇವೆ ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ಹೊಸ ಆವರಣವು ಸಂಸ್ಥೆಯ ಮುಂದಿನ ಬೆಳವಣಿಗೆಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಐದು ದಶಕಗಳ ಸೇವೆಗೆ ಹೊಸ ಅಧ್ಯಾಯ

ದೇಶಪಾಂಡೆ ಇಂಡಸ್ಟ್ರೀಸ್ ಐದು ದಶಕಗಳ ಹಿಂದೆ ಬೆಳಗಾವಿಯಲ್ಲಿ ಆರಂಭಗೊಂಡು, ಜನರೇಟರ್ ಕ್ಷೇತ್ರದಲ್ಲಿ ತನ್ನದೇ ಆದ ವಿಶ್ವಾಸಾರ್ಹತೆಯನ್ನು ನಿರ್ಮಿಸಿಕೊಂಡಿದೆ. ಮಾರಾಟದ ಜೊತೆಗೆ ಮಾರಾಟೋತ್ತರ ಸೇವೆ, ಸರ್ವಿಸಿಂಗ್ ಹಾಗೂ ಗ್ರಾಹಕರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಂಸ್ಥೆ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

50ನೇ ವರ್ಷಾಚರಣೆಯ ಸಂದರ್ಭದಲ್ಲಿ ಆರಂಭಗೊಂಡಿರುವ ನೂತನ ಕಚೇರಿ–ಕಾರ್ಖಾನೆ ಸಂಸ್ಥೆಯ ಮುಂದಿನ ಬೆಳವಣಿಗೆಗೆ ಹೊಸ ವೇದಿಕೆಯಾಗಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ನೀಡಲು ಅನುಕೂಲವಾಗಲಿದೆ.

ಐದು ದಶಕಗಳ ಪರಂಪರೆ, ಗುಣಮಟ್ಟ, ಸೇವೆ ಮತ್ತು ಗ್ರಾಹಕರ ವಿಶ್ವಾಸವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ದೇಶಪಾಂಡೆ ಇಂಡಸ್ಟ್ರೀಸ್ ಹೊಸ ಆವರಣದಿಂದ ತನ್ನ ಪಯಣವನ್ನು ಮತ್ತಷ್ಟು ವೇಗಗೊಳಿಸಿದೆ.

देशपांडे इंडस्ट्रीजचा ५० वा वर्धापनदिन उत्साहात; नवीन कार्यालय–कारखान्याचे उद्घाटन

नवीन परिसरातून सेवा विस्तारासाठी सज्ज: आमदार अभय पाटील

बेळगाव: डिझेल जनरेटर सेटच्या विक्री, सर्व्हिसिंग आणि मार्केटिंग क्षेत्रात पाच दशकांपासून सेवा देणाऱ्या देशपांडे इंडस्ट्रीजच्या ५० व्या वर्धापनदिनानिमित्त उद्यमबाग येथील बीईएमसीआयईएल इंडस्ट्रियल इस्टेटमध्ये नव्याने उभारण्यात आलेल्या कार्यालय आणि कारखान्याचा शुक्रवारी शुभारंभ करण्यात आला.

आमदार अभय पाटील आणि प्रीती पाटील यांच्या हस्ते संस्थेच्या नवीन परिसराचे उद्घाटन करण्यात आले. पाच दशकांपूर्वी सुरू झालेल्या या संस्थेने आपल्या दर्जेदार सेवा, गुणवत्ता आणि ग्राहकांचा विश्वास यामुळे केवळ बेळगावातच नव्हे तर शेजारील राज्यांमध्येही स्वतःचे वेगळे स्थान निर्माण केले आहे. या पार्श्वभूमीवर नवीन कार्यालय आणि कारखान्याचा शुभारंभ हा संस्थेच्या वाटचालीतील आणखी एक महत्त्वाचा टप्पा ठरला.

कार्यक्रमाला उद्योजक तथा चित्रपट निर्माते श्रीकांत देसाई, ग्रीव्ह्ज कॉटन लिमिटेडच्या सेल्स अँड सर्व्हिस विभागाचे जनरल मॅनेजर विजय छट्टाणी, सर्व्हिस अँड आयबी विभागाचे एजीएम नरसिंहराव कुलकर्णी, भरत पाटील, भरत देशपांडे, मेधा देशपांडे, श्रिया देशपांडे, योगेश मुरकीबावी, सान्विका यांच्यासह मान्यवर, उद्योजक, संस्थेचे कर्मचारी, ग्राहक आणि हितचिंतक उपस्थित होते.

नवीन परिसरातून सेवा अधिक विस्तारावी: अभय पाटील

कार्यक्रमात बोलताना आमदार अभय पाटील म्हणाले की, नवीन वास्तूमध्ये देशपांडे इंडस्ट्रीज आज नवी सुरुवात करीत आहे, ही आनंदाची बाब आहे.

“देशपांडे इंडस्ट्रीजचे मालक माझे जवळचे मित्र आहेत. गेल्या अनेक वर्षांपासून संस्थेने आपल्या सेवेतून जनमानसात विश्वास निर्माण केला आहे. आता नवीन परिसरात सुरू झालेली ही संस्था आणखी प्रगती करावी. बेळगावसह शेजारील राज्यांतील नागरिकांनाही अधिक चांगली सेवा देण्यास सक्षम व्हावी,” अशी शुभेच्छा त्यांनी दिल्या.

पाच दशकांपर्यंत एखादी संस्था यशस्वीपणे चालविणे सोपे नाही. सातत्यपूर्ण दर्जेदार सेवा, ग्राहकांचा विश्वास आणि बदलत्या तंत्रज्ञानाशी जुळवून घेण्याची क्षमता यामुळेच देशपांडे इंडस्ट्रीजने इतकी वर्षे आपले स्थान कायम राखले आहे, असेही त्यांनी कौतुकाने नमूद केले.

नवीन जागेतून नवे यश मिळो: श्रीकांत देसाई

उद्योजक तथा चित्रपट निर्माते श्रीकांत देसाई म्हणाले की, देशपांडे इंडस्ट्रीज गेल्या ५० वर्षांपासून उत्कृष्ट कार्य करीत आहे. आता श्रिया देशपांडे यांच्या नेतृत्वाखाली संस्था आणखी प्रगतीच्या दिशेने वाटचाल करीत असल्याचे त्यांनी सांगितले.

“नवीन जागेतून संस्थेला नवे यश मिळो. मोठ्या कंपन्यांच्या जनरेटरची विक्री, सर्व्हिसिंग आणि मार्केटिंगचे काम देशपांडे इंडस्ट्रीज अतिशय चांगल्या पद्धतीने हाताळत आहे. ग्राहकांना विश्वासार्ह सेवा देण्याचे हे कार्य यापुढेही असेच सुरू राहावे,” अशी अपेक्षा त्यांनी व्यक्त केली.

देशपांडे इंडस्ट्रीजने पाच दशकांच्या वाटचालीत मिळविलेला अनुभव पुढील पिढीकडे सक्षमपणे हस्तांतरित करून संस्था आणखी मोठ्या उंचीवर पोहोचावी, अशा शुभेच्छाही त्यांनी दिल्या.

ग्राहकांचा विश्वास हीच आमच्या प्रगतीची शक्ती: श्रिया देशपांडे

संस्थेच्या श्रिया देशपांडे म्हणाल्या की, त्यांच्या आजोबांनी स्थापन केलेली ही संस्था आज टप्प्याटप्प्याने प्रगती करीत पुढे जात असल्याचा अभिमान आहे.

“आमच्या आजोबांनी स्थापन केलेली ही संस्था आज मोठी होत पुढे जात आहे. या प्रगतीमागे आमच्या ग्राहकांनी दाखविलेला विश्वास हेच प्रमुख कारण आहे. पाच दशकांचा प्रवास यशस्वीपणे पूर्ण करून आता नवीन कार्यालय आणि कारखाना सुरू करणे हा आमच्यासाठी अत्यंत भावनिक क्षण आहे,” असे त्यांनी सांगितले.

ग्राहकांना दर्जेदार उत्पादने आणि विश्वासार्ह सेवा देण्याचे कार्य यापुढेही सुरू ठेवणार असल्याचे त्यांनी सांगितले. नवीन परिसर संस्थेच्या आगामी प्रगतीला आणखी बळ देईल, असा विश्वासही त्यांनी व्यक्त केला.

पाच दशकांच्या सेवेला नव्या अध्यायाची सुरुवात

देशपांडे इंडस्ट्रीजने पाच दशकांपूर्वी बेळगावमध्ये आपली वाटचाल सुरू केली आणि जनरेटर क्षेत्रात विश्वासार्ह संस्था म्हणून स्वतःची ओळख निर्माण केली. विक्रीसोबतच विक्रीनंतरची सेवा, सर्व्हिसिंग आणि ग्राहकांच्या गरजांना तत्पर प्रतिसाद देत संस्थेने आपल्या सेवा क्षेत्राचा विस्तार केला आहे.

५० व्या वर्धापनदिनानिमित्त सुरू करण्यात आलेले नवीन कार्यालय–कारखाना संस्थेच्या आगामी विकासासाठी एक नवे व्यासपीठ ठरणार असून, आधुनिक सुविधांच्या माध्यमातून ग्राहकांना अधिक प्रभावी सेवा देणे शक्य होणार आहे.

पाच दशकांची परंपरा, गुणवत्ता, सेवा आणि ग्राहकांचा विश्वास पुढील पिढीकडे घेऊन जाण्याच्या संकल्पासह देशपांडे इंडस्ट्रीजने नवीन परिसरातून आपल्या प्रगतीच्या प्रवासाला आणखी वेग दिला आहे.

Deshpande Industries Celebrates 50 Years; New Office and Factory Inaugurated

Company Poised to Expand Services from New Facility: MLA Abhay Patil

Belagavi: Deshpande Industries, which has completed five decades of service in the sale, servicing and marketing of diesel generator sets, marked its 50th anniversary with the inauguration of its newly constructed office and factory at the BEMCIL Industrial Estate in Udyambag here on Friday.

MLA Abhay Patil and Preeti Patil inaugurated the new premises of the company. Established five decades ago, Deshpande Industries has earned a strong reputation not only in Belagavi but also in neighbouring states through its quality products, reliable services and customer trust. The inauguration of the new facility marks another significant milestone in the company’s journey.

Entrepreneur and film producer Shrikant Desai, Greaves Cotton Limited General Manager of Sales and Service Vijay Chattani, AGM of Service and IB Narasimha Rao Kulkarni, Bharat Patil, Bharat Deshpande, Medha Deshpande, Shriya Deshpande, Yogesh Murkibavi and Sanvika, along with entrepreneurs, company employees, customers and well-wishers, were present.

New Facility Will Help Expand Services: Abhay Patil

Speaking on the occasion, MLA Abhay Patil said it was a matter of happiness that Deshpande Industries was beginning a new chapter from its new premises.

“The owners of Deshpande Industries are my close friends. The company has earned public appreciation and trust through its services over the years. I hope the company achieves greater growth from its new facility and expands its services to people not only in Belagavi but also in neighbouring states,” he said.

He appreciated the company for successfully completing five decades of operations, noting that maintaining a successful business for such a long period requires consistent quality, customer confidence and the ability to adapt to changing technology.

May the New Facility Bring New Success: Shrikant Desai

Entrepreneur and film producer Shrikant Desai said Deshpande Industries had been doing excellent work for the past 50 years and was now moving towards further growth under the leadership of Shriya Deshpande.

“May this new facility bring new success to the company. Deshpande Industries has been handling the sales, servicing and marketing of generators for major companies very efficiently. I wish the company continued success in providing reliable services to its customers,” he said.

He expressed the hope that the company would effectively carry forward the experience gained over five decades and scale greater heights in the years ahead.

Customer Trust Is the Strength Behind Our Growth: Shriya Deshpande

Speaking on the occasion, Shriya Deshpande said it was a proud and emotional moment for the family as the institution established by their grandparents had grown steadily over the years.

“The company established by our grandparents is continuing to grow and move forward. The trust placed in us by our customers is the main reason behind this growth. Starting our new office and factory after completing five decades is a very emotional and memorable moment for us,” she said.

She assured that the company would continue to provide quality products and reliable services to its customers. She expressed confidence that the new facility would provide further impetus to the company’s future growth.

A New Chapter After Five Decades of Service

Deshpande Industries began its journey in Belagavi five decades ago and has established itself as a trusted name in the generator industry. Along with sales, the company has expanded its operations through after-sales service, servicing and prompt response to customer requirements.

The new office and factory, inaugurated as part of the company’s 50th anniversary celebrations, is expected to provide a stronger platform for its future expansion. Equipped with modern facilities, the new premises will enable the company to offer more efficient and comprehensive services to its customers.

With a commitment to carry forward its five-decade legacy of quality, service and customer trust, Deshpande Industries has embarked on a new chapter of grow​th from its new facility in Udyambag.

​ 

Related Articles

Back to top button