Belagavi NewsBelgaum NewsKannada NewsKarnataka NewsLatestSports

*ದೇಶಿಯ ಕ್ರೀಡೆಗೆ ಅಣ್ಣಾಸಾಹೇಬ ಜೊಲ್ಲೆಯವರ ಕೊಡುಗೆ ಅಪಾರ: ಕಬಡ್ಡಿ ಎಂ.ಪಿ ಟ್ರೋಫಿಗೆ ಚಾಲನೆ ನೀಡಿದ ಗಣ್ಯ ಮಾನ್ಯರು*

ಪ್ರಗತಿವಾಹಿನಿ ಸುದ್ದಿ; ಹಾರೂಗೇರಿ : ಮನುಷ್ಯನು ಬುದ್ಧಿ ವಿಕಾಸಕ್ಕೆ ಸಹಕಾರಿಯಾಗದೆ ನಾವು ಮಾನಸಿಕ ಸದೃಡವಾಗಿರ ಬೇಕಾಗಿತ್ತು ಮೊದಲು ದೈಹಿಕವಾಗಿ ಸದೃಡವಾಗಿರ ಬೇಕು ಬರಿ ಬುದ್ಧಿವಂತರಾದರೆ ಸಾಲದು ಆರೋಗ್ಯವಂತ ಬುದ್ದಿವಂತರಾಗಬೇಕು ಹಾಗಾಗಿ ಅಣ್ಣಾಸಾಹೇಬ ಜೊಲ್ಲೆಯವರು ಮಾಡುತ್ತಿರುವ ಗ್ರಾಮೀಣ ಭಾಗದಲ್ಲಿ ಎಷ್ಟೊಂದು ಕ್ರೀಡಾಪಟುಗಳು ಎಲೆಮರೆಕಾಯಿಯಂತೆ ಅವರನ್ನು ಗುರುತಿಸಲಿಕ್ಕೆ ಆಗುತ್ತಿಲ್ಲ ಇಲ್ಲಿ ಮಕ್ಕಳ ಪ್ರತಿಮೆ ಇದ್ದಾಗ ಮಕ್ಕಳಿಗೆ ಪ್ರತಿಮೆಗೆ ತಕ್ಕಂತಹ ಪ್ರೋತ್ಸಾಹ ಸಿಗಬೇಕಾಗಿದೆ ಅದು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಅಣ್ಣಾಸಾಬ ಜೊಲ್ಲೆ ಯವರು ಮಾಡುತ್ತಿದ್ದಾರೆ ಎಂದು ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಗಳು ಮಾತನಾಡಿದರು

ಪಟ್ಟಣದ ಸರ್ಕಾರಿ ಶಾಲೆಗಳ ಆವರಣದ ಮೈದಾನದಲ್ಲಿ ಅಣ್ಣಾಸಾಬ ಜೋಲ್ಲೆಯವರ ಎಂ.ಪಿ.ಟ್ರೋಪಿಯನ್ನು ಕುಡಚಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪುರುಷ ಮತ್ತು ಮಹಿಳಾ ಭವ್ಯ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಮಾಜಿ ಶಾಸಕ ಪಿ ರಾಜೀವ್ ಚಾಲನೆ ನೀಡಿದರು.

ಗ್ರಾಮೀಣ ಭಾಗದ ಕ್ರೀಡೆ ಎಂದರೆ ಅದು ಕಬಡ್ಡಿ ಈಗ ಅದನ್ನು ಗುರುತಿಸಿ ನಾವು ಬೆಳೆಸ ಬೇಕಾಗುತ್ತದೆ ಮತ್ತು ಅತಿ ಪ್ರಾಮಾಣಿಕ ಆಟ ಎಂದರೆ ಕಬಡ್ಡಿ ಆಟ ಆಟವಾಡುವಾಗ ಔಟಾದರೆ ತಾನಾಗಿ ಒಪ್ಪಿಕೊಂಡು ಕೈ ಮೇಲೆ ಎತ್ತುವ ಕೆಲಸ ಮಾಡುತ್ತಾರೆ ಮತ್ತು ಈಗ ಮುಗಳಖೋಡ ಮತ್ತು ಪರಮಾನಂದವಾಡಿಯ ಬಾಲಕಿಯರು ಫೈನಲ್ ಗೆ ಬಂದಿದ್ದಾರೆ ಅದು ನನಗೆ ತುಂಬಾ ಸಂತೋಷ ಎನಿಸುತ್ತದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಬ ಜೋಲ್ಲೆಯವರು ಹೇಳಿದರು. ಕುರ್ಚಿ ಮತಕ್ಷೇತ್ರದ ಬಾಲಕಿಯರ 15 ತಂಡಗಳು ಸೇರಿದಂತೆ ಬಾಲಕರ 56 ತಂಡಗಳು ಭಾಗವಹಿಸಿ ಸೆಣಸಾಟ ನಡೆಸಿದವು. ಕ್ರೀಡಾಪಟುಗಳಿಗೆ ಊಟ, ವಸತಿ, ಅಲ್ಫೋಪಹಾರ , ಶುದ್ಧ ಕುಡಿಯುವ ನೀರು, ಆಯೋಜಕರು ಅಚ್ಚುಕಟ್ಟಾಗಿ ನಡೆಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖಾನಗೌಡರ,ರಮೇಶ ಖೇತಗೌಡರ,ಹಣಮಂತ ಯಲ್ಲಶೆಟ್ಟಿ, ನಿಂಗಪ್ಪ ಪಕಾoಡೆ,ದೀಪಕ ಪಾಟೀಲ,ಸಂತೋಷ ಸಿಂಗಾಡಿ, ಶ್ರೀಶೈಲ ಉಮರಾಣಿ,ರಾಮಣ್ಣ ಗುರವ, ಬಸನಗೌಡ ಆಸಂಗಿ,ಪರಗೌಡ ಉಮರಾಣಿ,ಶರಣ್ಣಗೌಡ ಪಾಟೀಲ, ಬಸವರಾಜ ಖೋತ,ರಾಜು ಅರಳ್ಳಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button