ಪಾವನ ಕ್ಷೇತ್ರ ಬಡೆಕೊಳ್ಳಮಠದಲ್ಲಿ ಶ್ರಾವಣ ಮಾಸದ ರುದ್ರಾಭಿಷೇಕ
ಪ್ರಗತಿವಾಹಿನಿ ಸುದ್ದಿ : ಹಿರೇಬಾಗೇವಾಡಿ : ಇಲ್ಲಿನ ಪಾವನ ಕ್ಷೇತ್ರ ಬಡೆಕೊಳ್ಳಮಠದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ರುದ್ರಾಭಿಷೇಕ ಕಾರ್ಯಕ್ರಮವು ಶನಿವಾರ ದಿನಾಂಕ 3- 8- 2019 ರಿಂದ ಬುಧವಾರ ದಿನಾಂಕ 28- 8 -2019 ರವರೆಗೆ ನಡೆಯಲಿದೆ.
ಅಭಿಷೇಕದ ವಿವರಗಳು : ರುದ್ರಾಭಿಷೇಕ, ಪಂಚಾಭಿಷೇಕ ಹಾಗೂ ಶ್ರೀ ಕರೆಮ್ಮ ದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ಕಾಳಿಕಾದೇವಿ ಅಭಿಷೇಕ ಮತ್ತು ಕುಂಕುಮಾರ್ಚನೆ, ಈ ಪ್ರಕಾರವಾಗಿ ಅಭಿಷೇಕ ಸೇವೆಗಳಿದ್ದು ಅಭಿಷೇಕ ಮಾಡಿಸುವ ಭಕ್ತಾದಿಗಳು ತಮ್ಮ ಹೆಸರನ್ನು ನೋಂದಾಯಿಸಿ ಪಾವತಿ ಪಡೆಯಬಹುದಾಗಿದೆ.
ಮುಂಜಾನೆ ಅಭಿಷೇಕದ ಸಮಯವು 6.30 ರಿಂದ 9 ಗಂಟೆ ವರೆಗೆ ಅಲಂಕಾರ ಪೂಜೆ, 10-30 ಮಂಗಳಾರತಿ. ಅನ್ನಪ್ರಸಾದ ಮಧ್ಯಾಹ್ನ 2ರಿಂದ 3-30ರವರೆಗೆ ಮಾತ್ರ. ಅಭಿಷೇಕಕ್ಕೆ ಬರಲು ಸಾಧ್ಯವಾಗದಿದ್ದಲ್ಲಿ ಅಭಿಷೇಕದ ಪ್ರಸಾದವನ್ನು ತೆಗೆದುಕೊಳ್ಳುವವರು ಸಾಯಂಕಾಲ 5 ಗಂಟೆಯ ಒಳಗೆ ತೆಗೆದುಕೊಂಡು ಹೋಗಬೇಕು. ನಿತ್ಯ ನಡೆಯುವ ಅನ್ನ ಪ್ರಸಾದಕ್ಕೆ ಧನ ಸೇವೆ ಸಲ್ಲಿಸುವವರು ಜನವರಿಗೆ ಸಲ್ಲಿಸಿ ಪಾವತಿ ಪಡೆಯಬೇಕು ಮತ್ತು ಅಕ್ಕಿ ರವೆ ಬೆಲ್ಲವನ್ನು ಅಧಿಕೃತದಾರರ ಕಡೆಗೆ ಮುಟ್ಟಿಸಬೇಕು.
ಪ್ರತಿವರ್ಷದಂತೆ ಶ್ರಾವಣಮಾಸದ ಜಾತ್ರೆಯು ಗುರುವಾರ ದಿನಾಂಕ 29- 8- 2019 ರಂದು ಪಲ್ಲಕ್ಕಿ ಉತ್ಸವ ಮತ್ತು ಶುಕ್ರವಾರ ದಿನಾಂಕ 30- 8- 2019 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ನಂತರ ಶ್ರೀಗಳ ಪಾದಪೂಜೆ 12.45 ರಥೋತ್ಸವ ನಂತರ ಮಹಾಪ್ರಸಾದ ಜರುಗುವುದು ಆಡಳಿತ ಮಂಡಳಿ ತಿಳಿಸಿದೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ