ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮನೆಗಳ್ಳನನ್ನು ಬಂಧಿಸಿ, 2014 ರಲ್ಲಿ ಘಟಿಸಿದ ಪ್ರಕರಣದಲ್ಲಿ ಕಳುವಾದ ರೂ.1,19,840 ಮೌಲ್ಯದ 39 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2014 ರಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆ ಹದ್ದಿಯಲ್ಲಿ ಘಟಿಸಿದ ಮನೆ ಕಳ್ಳತನ ಪ್ರಕರಣದಲ್ಲಿ ಕಳುವು ಮಾಡಿ ನಾಪತ್ತೆ ಆಗಿದ್ದ ಆರೋಪಿತರನ್ನು ಬೆರಳು ಮುದ್ರೆ ಸಹಾಯದಿಂದ ಪತ್ತೆ ಮಾಡುವಲ್ಲಿ ಹಿರೇಬಾಗೇವಾಡಿ ಠಾಣೆಯ ಪಿಎಸ್‌ಐ ಎ. ಎಚ್ ಪಠಾಣ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
2014 ರಲ್ಲಿ ಘಟಿಸಿದ ಮನೆ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಹಿರೇಬಾಗೇವಾಡಿ ಪೊಲೀಸ್‌ರು ಘಟನಾ ಸ್ಥಳದಲ್ಲಿ ಬೆರಳು ಮುದ್ರೆ ಘಟಕದವರ ಪರಿಶೀಲನೆ ವೇಳೆ ದೊರೆತ ಬೆರಳು ಮುದ್ರೆಯಿಂದ ಆರೋಪಿತನನ್ನು ಪತ್ತೆ ಮಾಡಿದ್ದಾರೆ.
ಆರೋಪಿ- ಕೃಷ್ಣಾ ಲಚ್ಚಪ್ಪಾ ಲಮಾಣಿ (28) (ಸಾ: ಕಮಲಾನಗರ ತಾಂಡಾ ತಡಸ್ ತಾ: ಶಿಗ್ಗಾಂವ ಜಿ: ಹಾವೇರಿ) ಎಂದು ತಿಳಿದುಬಂದಂತೆ ಅವನನ್ನು ದಸ್ತಗಿರಿ ಮಾಡಿ, ಕಳ್ಳತನ ಮಾಡಿ ಆತನ ಬಳಿ ಇಟ್ಟುಕೊಂಡಿದ್ದರೂ.1,19,840 ಮೌಲ್ಯದ 39 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರಗಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಮಹಾದೇವ ಕುಂಬಾರ. ಪಿಐ ಪಿಂಗರ್ ಪ್ರಿಂಟ್ ಮತ್ತು ಅವರ ಸಿಬ್ಬಂದಿ ಹಾಗೂ ಹಿರೇಬಾಗೇವಾಡಿ ಠಾಣೆಯ ಪಿಎಸ್‌ಐ ಎ. ಎಚ್ ಪಠಾಣ ಹಾಗೂ ಸಿಬ್ಬಂದಿ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ