Kannada NewsKarnataka News

ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ: ಮುಖಂಡರಿಂದ ಸ್ವಾಗತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿಗೆ ಮಂಗಳವಾರ ಸಂಜೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಹಾಗೂ ಇತರರು ಸ್ವಾಗತಿಸಿದರು.

ಬುಧವಾರ ನಡೆಯಲಿರುವ ಬಿಜೆಪಿ ಪಾದಯಾತ್ರೆ ಹಿನ್ನೆಲೆಯಲ್ಲಿ ಕಟೀಲು ಬೆಳಗಾವಿಗೆ ಆಗಮಿಸಿದ್ದಾರೆ. ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಅವರು ಬೆಳಗಾವಿಗೆ ಆಗಮಿಸಿದ್ದಾರೆ. ಶಂಕರಗೌಡ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ, ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ, ಮಾಜಿ ಶಾಸಕ ಸಂಜಯ ಪಾಟೀಲ, ವಿಭಾಗ ಪ್ರಭಾರ ಈರಣ್ಣ ಕಡಾಡಿ ಮೊದಲಾದವರು ಕಟೀಲು ಅವರನ್ನು ಸ್ವಾಗತಿಸಿದರು.

Home add -Advt
ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ನಳೀನ್ ಕುಮಾರ ಚರ್ಚಿಸಿದರು

ಬುಧವಾರ ಬೆಳಿಗ್ಗೆ 11 ಗಂಟೆಗೆ ಟಿಳಕವಾಡಿಯ ವೀರಸೌಧದಲ್ಲಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಕಟೀಲು ಚಾಲನೆ ನೀಡಲಿದ್ದಾರೆ. ನಂತರ ನಗರದಲ್ಲಿ ಅವರು ಪಾದಯಾತ್ರೆ ಮಾಡುವರು.

ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಗಾಂಧೀ ಜಯಂತಿಯಿಂದ ಸರ್ದಾರ ವಲ್ಲಭಾಯಿ ಪಟೇಲ ಅವರ ಜನ್ಮದಿನವಾದ ಅ.30 ರವರೆಗೆ ಬಿಜೆಪಿಯ ಪ್ರತಿ ಸಂಸದರು 150 ಕಿಮೀ ಪಾದಯಾತ್ರೆ ಮಾಡುವ ಮೂಲಕ ಜನಜಾಗೃತಿ ಮಾಡುವರು.

ಸಂಬಂಧಿಸಿದ ಸುದ್ದಿಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಬೆಳಗಾವಿಗೆ

Related Articles

Back to top button