ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿ ಠಾಣೆ ಪೊಲೀಸರು ಪನ್ನಿ ಎಂಬ ಗಾಂಜಾ ಮಾರಾಟಗಾರನನ್ನು ಬಂಧಿಸಿ ರೂ.೧೬,೮೦೦ ಮೌಲ್ಯದ ಪನ್ನಿ, ಒಂದು ಅಟೋರಿಕ್ಷಾ ಹೀಗೆ ಒಟ್ಟು ರೂ.೧,೧೮,೪೦೦ ಮೌಲ್ಯದ ವಸ್ತುಗಳ ಜಪ್ತು ಮಾಡಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಎನ್.ಎಚ್. ೪ ರಸ್ತೆಯ ಹಲಗಾ ಅಂಡರಬ್ರೀಡ್ಜದಲ್ಲಿ ಮಧ್ಯಾಹ್ನ ೧೧.೪೫ ಗಂಟೆಯ ಸುಮಾರಿಗೆ ಒಬ್ಬನು ಸಾರ್ವಜನಿಕರಿಗೆ ಡ್ರಗ್ಸ್ ಚೀಟಿಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಬಂದ ಖಚಿತ ಮಾಹಿತಿಯನ್ನು ಆಧರಿಸಿ ಕೆ. ಶಿವಾರೆಡ್ಡಿ (ಎಸಿಪಿ ಗ್ರಾಮೀಣ ಉಪವಿಭಾಗ) ಮಾರ್ಗದರ್ಶನದಲ್ಲಿ ಎನ್.ಎನ್.ಅಂಬಿಗೇರ (ಪಿ.ಐ.) ನೇತೃತ್ವದಲ್ಲಿ ಎಮ್. ಡಿ. ಪಟ್ಟಣದ ಎಎಸ್‌ಐ , ವೈ ಎಸ್. ಹತ್ತರವಾಟ, ಆರ್. ಎನ್. ಹುಚಗೌಡ್ರ, ಬಿ. ಪಿ. ಬೊಳಶೆಟ್ಟಿ,. ಎಸ್. ಎಸ್. ಭಾಂವಿ, ಎಸ್. ಬಿ. ಪದಕಿಮಠ, ಆರ್. ಎಸ್. ಕೆಳಗಿನಮನಿ ದಾಳಿ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿ ಸಯ್ಯದಅಲಿ ಶರ್ಪುದ್ದೀನ ಗವಾಸ (೩೦) (ಆಟೋ ರಿಕ್ಷಾ ಚಾಲಕ, ಸಾ; ಉಜ್ವಲ ನಗರ ಬೆಳಗಾವಿ) ಈತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಅಂದಾಜು ರೂ.೧೬,೮೦೦ ಮೌಲ್ಯದ ೨೩ ಗ್ರಾಂ ತೂಕದ ಪೆನ್ನಿ@ ಬೀಟ್ ಎಂಬ ಮಾದಕ ಪದಾರ್ಥದ ೮೪ ಸಣ್ಣ ಪ್ಯಾಕೇಟಗಳು, ರೂ.೧೬೦೦ ನಗದು, ಸುರಳಿ ಮಾಡಿದ ಒಂದು ಅಲ್ಯುಮಿನಿಯಂ ಪಾಯಲ್ ಪೇಪರ, ಗಾಂಜಾ ಸೇದುವ ಚಿಲುಮೆ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ನಂಬರ ಕೆಎ-೨೨/ಸಿ ೬೮೯೧ ಸೇರಿ ಆತನಿಂದ ಒಟ್ಟು ರೂ.೧,೧೮,೪೦೦ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ