Kannada NewsKarnataka NewsLatest

​2.30 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೋದಗಾ ಗ್ರಾಮದಿಂದ ಹಿರೇಬಾಗೇವಾಡಿ ರಸ್ತೆಯ ಆಯ್ದ ಭಾಗಗಳಲ್ಲಿ 2.6 ಕಿಲೋಮೀಟರ್ ವರೆಗಿನ  ಹಾಗೂ ಖನಗಾಂವ ಗ್ರಾಮದಿಂದ ಸುಳೇಬಾವಿ ರಸ್ತೆಯ ಆಯ್ದ ಭಾಗಗಳಲ್ಲಿ 4.2 ಕಿಲೋಮೀಟರ್ ಗಳವರೆಗೆ ಡಾಂಬರೀಕರಣ ಕಾಮಗಾರಿಗಳಿಗೆ  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಪೂಜೆ ನೆರವೇರಿಸಿದರು.
 
“ಬೆಳಗಾವಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲಿಯೇ ಕಂಡರಿಯದಷ್ಟು ಅಭಿವೃದ್ಧಿ ಕೆಲಸಗಳನ್ನು ತಂದಿದ್ದೇನೆ, ಇಡೀ ರಾಜ್ಯದಲ್ಲಿಯೇ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುತ್ತಿದ್ದೇನೆ,” ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಗ್ರಾಮಗಳ ಹಿರಿಯರು, ಮೊದಗಾ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಗಂಗಣ್ಣ ಕಲ್ಲೂರ, ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಕಾಂಚನಾ ನಾಯಿಕ್, ಉಪಾಧ್ಯಕ್ಷೆ ನಮೃತಾ ಕಾಳೆ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಶಿವಾಜಿ ಅಷ್ಟೇಕರ್, ಶಿವಾನಂದ ರಾಜಗೋಳಿ, ಮಂಜುನಾಥ ತುಕ್ಕಾರ, ಪಾಂಡು ಬಡಗಾವಿ, ಸುಭಾಷ ಹೆಗಡೆ, ತೇಜರಾಜ ಮಾರಿಹಾಳ, ಭಾಗೀರಥಾ ದಾನೋಜಿ, ಸಾಗರ ಹಣಬರ, ಮಾರುತಿ ಮುಗಳಿ, ಗಂಗವ್ವ ಮುಚ್ಚಂಡಿ,  ಬಸವರಾಜ ಬೆಕ್ಕಿನಕೇರಿ, ಮಹೇಶ ಸುಗ್ಗೆಣ್ಣವರ, ಹೊನ್ನಪ್ಪ ಹೊಸಮನಿ, ಲಗಮಪ್ಪ ಚಚಡಿ, ಮಲಕಪ್ಪ ನಾಯ್ಕ, ಮಹೇಶ ಬಗನಾಳ, ವಿಠ್ಠಲ ಹೊಸಮನಿ, ರುಕ್ಮಿಣಿ ಹೊಸಮನಿ ಹಾಗೂ ಆಪ್ತ ಸಹಾಯಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button