Kannada NewsLatest

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಪರ್ವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸರಣಿ ಮುಂದುವರಿದಿದೆ. 

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರಾಜ್ಯ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಕ್ಷೇತ್ರಕ್ಕೆ ನಿರಂತರವಾಗಿ ಯೋಜನೆಗಳನ್ನು ತರುತ್ತಿದ್ದು, ಅವರ ದೆಹಲಿ, ಬೆಂಗಳೂರು ಪ್ರವಾಸದ ಮಧ್ಯೆಯೂ ಕಾಮಗಾರಿಗಳು ನಿಂತಿಲ್ಲ. ಗ್ರಾಮಸ್ಥರಿಂದಲೇ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಮಾಡಿಸಿ ಚಾಲನೆ ನೀಡಲಾಗುತ್ತಿದೆ. 

ಕಳೆದ ಹತ್ತಾರು ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದೆ ಹಿಂದುಳಿದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಣತೊಟ್ಟಿರುವ ಹೆಬ್ಬಾಳಕರ್, ಪ್ರತಿ ಊರಿಗೆ ಒಂದಿಲ್ಲೊಂದು ಯೋಜನೆಗಳನ್ನು ತರುತ್ತಿದ್ದಾರೆ.

ಶಾಸಕರು ನವದೆಹಲಿ, ಬೆಂಗಳೂರು ಪ್ರವಾಸದಲ್ಲಿದ್ದರೂ ಶಾಸಕರ ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತು ಪುತ್ರ ಮೃಣಾಲ್ ಹೆಬ್ಬಾಳಕರ್ ಮಾರ್ಗದರ್ಶನದಲ್ಲಿ ಗ್ರಾಮದ ಹಿರಿಯರೇ ಕಾಮಗಾರಿಗಳಿಗೆ ಪೂಜೆ ನಡೆಸಿ ವಿದ್ಯುಕ್ತ ಚಾಲನೆ ನೀಡುತ್ತಿದ್ದಾರೆ.

 ಬಡಸ್ ಕೆ ಎಚ್ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ 1.50 ಕೋಟಿ ರೂ.  ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ  ಹಾಗೂ ಗರಡಿ ಮನೆ  ನಿರ್ಮಾಣದ ಪೂಜಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ  ಹಿರಿಯರು,   ಗ್ರಾಮ ಪಂಚಾಯತ್ ಸದಸ್ಯರು, ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
 ಹಿಂಡಲಗಾ ಗ್ರಾಮದ ವಿಜಯನಗರದಲ್ಲಿ ರಸ್ತೆಯ ಕಾಮಗಾರಿಗೆ ಗ್ರಾಮದ  ಹಿರಿಯರು ಚಾಲನೆ ನೀಡಿದರು. ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು,  ಚನ್ನರಾಜ ಹಟ್ಟಿಹೊಳಿ, ಯುವರಾಜ  ಕದಂ, ಎಪಿಎಮ್ ಸಿ ಸದಸ್ಯರು ಉಪಸ್ಥಿತರಿದ್ದರು.  
 ಉಚಗಾಂವ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ  ಗ್ರಾಮದ  ಹಿರಿಯರು ಗುದ್ದಲಿ ಪೂಜೆ ನೆರವೇರಿಸಿದರು.   ಗ್ರಾಮ ಪಂಚಾಯತ್ ಸದಸ್ಯರು, ಯುವರಾಜ ಕದಂ,  ಚನ್ನರಾಜ ಹಟ್ಟಿಹೊಳಿ ಹಾಗೂ ಇತರರು ಇದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button