Kannada NewsLatest

ಅಭಿಷೇಕ ಜೋಶಿ ದಿವಾಣಿ ನ್ಯಾಯಾಧೀಶರಾಗಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನವೆಂಬರ್ 2020 ರಲ್ಲಿ ದಿವಾಣಿ ನ್ಯಾಯಾಧೀಶರ ಹುದ್ದೆಗಾಗಿ ಜರುಗಿದ ಪರೀಕ್ಷೆಯಲ್ಲಿ ಬೆಳಗಾವಿಯ ಅಭಿಷೇಕ.ರಾ.ಜೋಶಿ ಇವರು ಉತ್ತೀರ್ಣರಾಗಿ ದಿವಾಣಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಾಮದುರ್ಗ, ಪಿರಿಯಾ ಪಟ್ಟಣ, ಜೋಯಿಡಾ ಹಾಗೂ ಬೆಳಗಾವಿಯ ಸ್ವಾಧ್ಯಾಯ ವಿದ್ಯಾಮಂದಿರ ಶಾಲೆಯಲ್ಲಿ ಮುಗಿಸಿದ್ದು ಮಾಧ್ಯಮಿಕ ಶಿಕ್ಷಣವನ್ನು ಕಾರವಾರದಲ್ಲಿ ಪಡೆದಿದ್ದಾರೆ.

ಕಾಲೇಜು ಶಿಕ್ಷಣ ಹಾಗೂ ಕಾನೂನು ಪದವಿಯನ್ನು ಬೆಂಗಳೂರಿನಲ್ಲಿ ಪಡೆದಿದ್ದಾರೆ. ವಕೀಲಿ ವೃತ್ತಿಯನ್ನು ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆಸಿಕೊಂಡು ಬಂದಿದ್ದರು.

Home add -Advt

Related Articles

Back to top button