Kannada NewsLatest

ಟ್ರ್ಯಾಕ್ಟರ್ ಹಾಯಿಸಿ ಮಗನನ್ನೇ ಕೊಂದವನಿಗೆ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟ್ರ್ಯಾಕ್ಟರ್ ಹಾಯಿಸಿ ಸ್ವಂತ ಮಗನನ್ನೇ ಕೊಂದವನಿಗೆ ಇಲ್ಲಿನ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ರಾಮದುರ್ಗ ತಾಲೂಕಿನ ಸಾಲಾಪುರ ಗ್ರಾಮದ ಶಿವಪ್ಪ ಗಂಗಪ್ಪ ಮುದಕವಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.

Home add -Advt

ಶಿವಪ್ಪ ಅವರಿಗೆ ಗಂಗಾಧರ ಹಾಗೂ ವಿಠ್ಠಲ ಎಂಬ ಇಬ್ಬರು ಮಕ್ಕಳಿದ್ದು ಈ ಪೈಕಿ ಗಂಗಾಧರನನ್ನು ಸ್ವತಃ ಶಿವಪ್ಪ ಅವರೇ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದು ವಿಚಾರಣೆ ವೇಳೆ ಸಾಬೀತಾಗಿದೆ.

ಗಂಗಾಧರ ಸರಿಯಾಗಿ ಕೆಲಸ ಮಾಡುವುದಿಲ್ಲ, ಊರಲ್ಲಿ ವಿನಾಕಾರಣ ಅಂಡಲೆಯುತ್ತಾನೆ ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದ ಶಿವಪ್ಪ 2018ರ ಮಾರ್ಚ್ 27ರಂದು ಗಂಗಾಧರ ಬೈಕ್ ತೆಗೆದುಕೊಂಡು ಧಾಬಾದಿಂದ ಪಾರ್ಸಲ್ ತರಲು ಹೋಗಿ ಮರಳುತ್ತಿದ್ದ ವೇಳೆ ನೈನಾ ಹಳ್ಳದ ಸೇತುವೆ ಬಳಿ ಮಗನ ಬೈಕ್ ಗೆ ಟ್ರ್ಯಾಕ್ಟರ್ ನಿಂದ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾನೆ.

ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಶ್ರೀನಿವಾಸ ಹಾಂಡ ಅವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ರಮಾಕಾಂತ ಚವ್ಹಾಣ ಅವರು ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ.

ಸರಕಾರದ ಪರ ಅಭಿಯೋಜಕಿ ಶೈಲಜಾ ಪಾಟೀಲ ವಾದ ಮಂಡಿಸಿದ್ದರು.

ಕಾಯಕದಲ್ಲಿ ದೇವರನ್ನು ಕಾಣುವ ಮೂಲಕ ಜೀವನ ಸಾರ್ಥಕವಾಗಲಿ; ಶಾಸಕಿ ಲಕ್ಷ್ಮೀ ಹೆಬ್ಬಾಳಕರ

https://pragati.taskdun.com/may-life-be-meaningful-by-seeing-god-in-work-mla-lakshmi-hebbalakar/

ವಿಟಿಯು ಬಳಿಯ ಅರಣ್ಯ ಪ್ರದೇಶಕ್ಕೆ ಬೆಂಕಿ; ಅಪಾರ ಸಸ್ಯಗಳು ಆಹುತಿ

https://pragati.taskdun.com/forest-fire-near-vtu-there-are-many-plants-burnt/

ಮಲಪ್ರಭಾ ನದಿ ತೀರದಲ್ಲಿ ಗಂಗಾ ಆರತಿ

https://pragati.taskdun.com/ganga-aarti-on-the-banks-of-malaprabha-river/

Related Articles

Back to top button